ದರ್ಪಣ - ಬಿಂಬ ೩


೧೧. ಕನಸು
ಕನಸಿನಲ್ಲಿ ಬದುಕುವುದು
ನಿದ್ದೆ ಮಾಡಿದಂತೆ
ಎದ್ದ ತಕ್ಷಣ ಕರಗುತ್ತದೆ...
ಕನಸನ್ನು ಬದುಕಿಸುವುದು
ತಪಸ್ಸು ಮಾಡಿದಂತೆ
ಕರಗಿದ್ದನ್ನು ಎಬ್ಬಿಸುತ್ತದೆ...

೧೨. ಅಂದು ಇಂದು

ಕೈ ಹಿಡಿದು ಬಂದಳು ಆಕೆ
ಅಂದು ನನ್ನ ಜೊತೆಯಲ್ಲಿ
ಈಗ ಕೈ ಮುಗಿಯುತ್ತಿದ್ದೇನೆ
ದಿನಾ ಅವಳಿಗೆ ಮನೆಯಲ್ಲಿ

೧೩. ನಾಶ
ಪ್ರಕೃತಿಯ ನಾಶವಿಂದು
ವೇಗವಾಗುತ್ತಿದೆ
ಇಳೆಗೆ ಮಳೆಯಿಂದು
ನಿಧಾನವಾಗುತ್ತಿದೆ

೧೪. ತತ್ತ್ವ
ಹೊಳೆಯುತಿದೆ ಹೊಸದಾದ
ಹಳೆತತ್ತ್ವ ಹೊಸದಾಗಿ
ಹೊಳೆಯುತಿದೆ ಹಳತಾದ
ಹೊಸತತ್ತ್ವ ಮನದಿ

೧೫. ಹಗಲುವೇಷ
ನವರಾತ್ರಿಯಲ್ಲಿ
ಹುಲಿವೇಷ ಮಾಮೂಲಿ
ಆದರೆ ಈಗೀಗ
ಪ್ರತಿದಿನವೂ ಜನರು
ಹಗಲುವೇಷದಲ್ಲಿ
ಕುಣಿಯುತ್ತಿದ್ದಾರೆ!!!

೧೬. ಹರಿ
ನದಿ ಹರಿಯುತಿರಿ
ದಿನ ಸೊಬಗಾಪುದು
ನದಿ ಹರಿಯದಿರೆ
ಬಾಳು ಹರಿಯುವುದು
ನೆಲವು ಬಿರಿಯುವುದು

೧೭. ಖುರ್ಚಿ
ಮುಖ್ಯಮಂತ್ರಿ ಖುರ್ಚಿ
ಬಿಸಿಯಾಗಿದೆ
ಅವರು ಬಿಸಿಮಾಡಿದ್ದಲ್ಲ
ಅವರ ಬಿಸಿ ನೋಡಿ
ಅದುವೇ ಬಿಸಿಯಾಗಿದೆ

೧೮. ಲಂಚ
ಓಟಿಗಾಗಿವರು
ನೋಟು ಬಿಚ್ಚಿ ಸವೆದರು
ಸೀಟು ಸಿಕ್ಕ ಮೇಲೆ
ನೋಟಿಗಾಗಿವರು
ಲಂಚ ಮೆಚ್ಚಿ
ಸವಿದರು

೧೯. ವಿಧಿ

ಬೇಸತ್ತಿದೆ ಮನ-
ವೇ ಸತ್ತಿದೆಯಿಂದು
ಕಂಡೂ ಕಂಡೂ
ದಾರುಣಗಳ ಹಿಂಡು
ಸಾಯದೇ ದಾರುಣತೆ?
ಅವುಗಳಿನ್ನೂ ಲತೆ!!!
ಕ್ರೂರವಾಯಿತೇ ವಿಧಿ?
ತೊರೆಯಿತೇ ಮಮತೆ?

೨೦. ಮಾ ನವ

ಮಾನವ ನೀನು
ನಿನ್ನಲ್ಲಿ ನವವಿದೆ
ವನವಿದೆ ಮನವೆದೆ
ಮನದಲ್ಲಿ ಧನವಿದೆ
ಸಹಕರಿಸು ಮನದಿಂದ
ಮುದದಿಂದ ಎಲ್ಲರಿಗೂ
ಒಳಿತಾಗುವುದು ನಿನಗೆ
ಮಾಧವನಿಂದ

                                  -ಶ್ರೀಸುತ

Photo Credit: marksandspencerದರ್ಪಣ - ಬಿಂಬ ೨ ನ್ನು ಓದಲು ಈ ಮುಂದಿನ ಲಿಂಕ್ ಗೆ ಭೇಟಿ ನೀಡಿ - ಬಿಂಬ ೨

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.