ದಿಬ್ಬಣದ ಸಾಲಿನಂತೆ
ಸಾಗುತಿದೆ ನೆನಪುಗಳು
ಮನವೆಂಬ ಪುಟದಲ್ಲಿ
ಅಚ್ಚಳಿಯದ ನೆನಪುಗಳು.
ಮಾತಾಗದ ಮಾತುಗಳು
ಹೇಳಲಾಗದ ಮಾತುಗಳು
ಮೌನದೊಳಗೆ ಮಾತಾಗಿ
ಮೌನಕೂ ಭಾರವಾಗುವ
ನೂರೆಂಟು ನೆನಪುಗಳು.
ಏಕಾಂತ ಬಯಸಿ ಬಂದರಿಲ್ಲಿ
ಸಾಗರದ ಅಲೆಯಂತೆ
ಸುಳಿದೇಳುತಿರುವ ನೆನಪು
ಮತ್ತೆ ಕಾಡುತಿದೆ ಮನವ.
ಹೊರಗೆಡವಲಾರದೆ ಒಳಗಿಳಿಸಿ
ಅರಗಿಸಲಾಗದೆ ಕ್ಷಣಕ್ಷಣವು
ರಣರಂಗವಾಗುತಿದೆ ಮನದಂಗಳವು.
ಉಲ್ಲಾಸದಿ ನಲಿಯಬೇಕೆಂಬ
ನನ್ನ ಮನದ ಬಯಕೆಗಳ
ಚಿವುಟಿ ಮೊಟಕಾಗಿಸುವಿರೇಕೆ
ಬಂದೇ ಬರುವಿರಾದರೆ ಬನ್ನಿ
ಉಲ್ಲಸಿತ ತಂಗಾಳಿಯಾಗಿ.
-ಅನ್ನಪೂರ್ಣ
ಚಿತ್ರವಿನ್ಯಾಸ: ಸತ್ಯ ಆಚಾರ್ಯ
Wow����nice. ��
ReplyDeleteThanks for you Comment... Keep supporting.
DeleteThank u Vidya..
Delete