ಗಣಪತಿಸ್ತುತಿ - ೧
ರಚನೆ: ದಿವಾಣ ದುರ್ಗಾಪ್ರಸಾದ್ ಭಟ್
ಯಮುನಾಕಲ್ಯಾಣಿ - ತ್ರಿವುಡೆತಾಳ
ರಾಗ: ಸಿಂಧೂಭೈರವಿ
ಯಮುನಾಕಲ್ಯಾಣಿ - ತ್ರಿವುಡೆತಾಳ
ರಾಗ: ಸಿಂಧೂಭೈರವಿ
ನೀಡು ಸನ್ಮತಿ ದೇವಗಣಪತಿ
ಬೇಡುವೆನು ವರದಾತನೇ
ಮಾಡುತಾರ್ಚನೆ ನಿನ್ನ ಸೇವನೆ
ಪಾಡುವೆನು ಗಜವದನನೇ ||
ಏಕದಂತನೆ ವಕ್ರತುಂಡನೆ
ಸ್ವೀಕರಿಸು ನೈವೇದ್ಯವಾ
ಪಾಕಭಕ್ಷ್ಯಗಳನ್ನು ಭುಂಜಿಸಿ
ಲೋಕವನು ಪೊರೆ ಬಾಂಧವಾ ||
ಭಾವರಾಗದಿ ಭಜಿಪೆನನುದಿನ
ದೇವವಂದ್ಯನೆ ಹರಸು ಬಾ
ಹೂವಮಾಲೆಯ ಸಿಂಗರಿಸುತಲಿ
ಸೇವೆಗೈವೆನು ಸಲಹು ಬಾ ||
ಆದಿಪೂಜಿತ ವಿಘ್ನನಾಶಕ
ಮೋದಕಪ್ರಿಯ ಗಣಪನೇ
ವೇದಮೂರುತಿ ನಾದಕೀರುತಿ
ಖೇದವನು ಕಳೆ ದೇವನೇ ||
ಭುವನಪತಿ ಗಜವಕ್ತ್ರರೂಪನೆ
ಬವಣೆಯನು ಕಳೆ ಸುಮುಖನೇ
ಪವಣಿಸುವ ಶ್ರೀಸುತನ ಭಕುತಿಗೆ
ಅವತರಿಸಿ ಬಾ ಸುಗುಣನೇ ||
-ಶ್ರೀಸುತ
ಗಣಪತಿ ಸ್ತುತಿ ಚೆನ್ನಾಗಿದೆ.
ReplyDeleteಧನ್ಯವಾದಗಳು ಅನ್ನಪೂರ್ಣ ಅವರೇ
Deleteಮೋದಕ ಪ್ರಿಯ ಗಣಪನೇ.... ಬಹಳ ಚೆನ್ನಾಗಿ ಬರೆದಿದ್ದೀರಿ....
ReplyDeleteಧನ್ಯವಾದಗಳು ಲಕ್ಷ್ಮಿ ಮೇಡಮ್...
Deleteಮೋದಕ ಪ್ರಿಯ ಗಣಪನೇ..... ಪದಗೋಳು ಸೂಪ್ಪರ್...
ReplyDeleteಧನ್ಯವಾದಗಳು...
Deleteಮೋದಕ ಪ್ರಿಯ ಗಣಪನೇ..... ಪದಗೋಳು ಸೂಪ್ಪರ್...
ReplyDeleteಧನ್ಯವಾದಗಳು
Delete