ಹಾರುವ ಹಕ್ಕಿಗಿಲ್ಲ ತಾ ಬೀಳುವೆನೆಂಬ ಭಯ
ಓಡುವ ಚಿಗರೆಗಿಲ್ಲ ತಾ ಎಡವುನೆಂಬ ಭಯ
ಈಜುವ ಮತ್ಸ್ಯಕಿಲ್ಲ ತಾ ಮುಳುಗುವೆನೆಂಬ ಭಯ
ನಡೆಯುವ ನಿನಗೇತಕೆ ಜಾರುವೆನೆಂಬ ಭಯ?
ಹುಟ್ಟುವ ದಿನದಿಂದ ಅವಸಾನ ದಿನದಾಚೆ
ಹುಟ್ಟೂರು ಹೆಸರೊಳಗೆ ಹಸಿರು ಮಣ್ಣೊಳಗೆ
ಕಾಲವದು ಬರುವಾಗ ಕಾಲು ಎಡವಿದ ರೀತಿ
ಹೀಗೇಕೆ ಅಡವಿಯೊಳು ಬಂಧಿ ನೀ ನಿನಗೆ?
ಹಿಂದೆ ನಡೆದುದ ಘಟನೆ ನೆನೆದು ಕಂಗಳು ಬತ್ತಿ
ಮುಂದೆ ನಡೆಯುವುದನ್ನು ನೆನೆದು ಕೊರಗುತ್ತಾ
ಸಂತಸದ ದಿನಗಳಲೂ ದುಃಖವನೇ ನೆನೆನೆನೆದು
ಪರಿತಪಿಸಿ ಏಕಳುವೆ ನೀನು ಪ್ರತಿನಿತ್ಯ?
ಛಲವ ತೊಡು ಬಲವ ತೊಡು ಮನಮೈಗಳಿಂಗೆ
ಅಡೆತಡೆಗಳೆದುರಾದರೂ ಮನವ ನಡೆಸು
ಸಾಮರ್ಥ್ಯವಿಹುದು ನಿನ್ನಲ್ಲಿ ಬಲವಿಹುದು
ಮತ್ತೇಕೆ ಹಿಂಜರಿಕೆ ಮನವ ಮುನ್ನಡೆಸು...
-ಶ್ರೀಸುತ
Photo Credit: Pic-click
ಅದ್ಭುತ ಬುದ್ಧಿವಾದ ಮನಕ್ಕೆ...
ReplyDeleteಧನ್ಯವಾದಗಳು ಸಹನಾ ಮೇಡಮ್
Deleteಚೆಂದದ ಬರಹ.
DeleteSmall &sweet.
ಧನ್ಯವಾದಗಳು ಶೀಲಾ ಮೇಡಮ್... Thank you so much
Delete