ನೆರೆ-ಹೊರೆ


ಮರವ ಕಡಿದೆ, ಇಳೆಯ ಸುಟ್ಟೆ
ಮನುಜ ನಿನ್ನ ಸ್ವಾರ್ಥಕೆ...
ಇಷ್ಟೆ ಸಾಕೆ ಇನ್ನು ಬೇಕೆ,
ನಿನ್ನ ಅಹಂಕಾರಕೆ...?
ಅಂದು, ಹಿಂದೆ
ಒಡಲ ಬಗೆದು ಮರಳು ತೆಗೆದು ಮಾರಲು....
ಇಂದು, ಬಂದೆ
ಮನೆಯ ಮುಂದೆ ಮರಳಿ ಮರಳ ಕೇಳಲು...
ನಾನು ನಾನು ನಾನು ಎಂದು
ಮುನ್ನುಗ್ಗಿ ಸಾಗಿದೆ...
ನಾನಾ ನೀನಾ ತಿಳಿಸಿ ಕೊಡಲು
ತಗ್ಗಿ-ಬಗ್ಗಿ ಬಂದಿಹೆ...
ನಿನ್ನ ಒಡಲು ಸುಡುತಲಿರಲು
ಈಗ ತಲೆಯ ಬಾಗಿಹೆ...
ನನ್ನ ಕರುಣೆ ಉಕ್ಕಿ
ಬರಲು ಸಮಯ ಕಳೆದು ಹೋಗಿದೆ...!!!
                       
                              -ಶ್ರೀ ಧನಂಜಯ ಬಳ್ಳಡ್ಕ

Photo Credit: wallpapers-fenix.eu

Author image
About the Author
ಹೆಸರು : ಶ್ರೀ ಧನಂಜಯ ಬಳ್ಳಡ್ಕ
▪︎ಧನಂಜಯ ಬಳ್ಳಡ್ಕ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬಳ್ಳಡ್ಕ ಗ್ರಾಮದವರು. ಹುಟ್ಟೂರಿನಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಇವರು ಬರವಣಿಗೆಯನ್ನು ಸಣ್ಣ ವಯಸ್ಸಿನಲ್ಲಿಯೇ ಮೈಗೂಡಿಸಿಕೊಂಡಿದ್ದರು. ಇವರ ಕೆಲವೊಂದು ಕವಿತೆಗಳು ಬಹುಮಾನಗಳನ್ನೂ ಬಾಚಿಕೊಂಡಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಇವರ ಆಸಕ್ತಿಗೊಂದು ಗರಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಆನಂತರ ಬಿ.ಎಡ್ ವ್ಯಾಸಾಂಗವನ್ನೂ ಮಾಡಿ ಇದೀಗ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಆರ್ಟ್ಸ್ & ಸಯೆನ್ಸ್ ಕಾಲೇಜಿನಲ್ಲಿ ಕೆಲ ಕಾಲ ಪ್ರಾಧ್ಯಾಪಕರಾಗಿದ್ದ ಇವರು ಪ್ರಸ್ತುತ ಶ್ರೀದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಕಟೀಲು ಇಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಶ್ರೀಯುತರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೃಷಿ ಮಾಡುವಂತಾಗಲಿ ಎಂದು ಆಶಿಸುತ್ತಾ ಇವರು ಬರೆದಿರುವಂತಹ ಅರ್ಥಗರ್ಭಿತವಾದ ಸಾಂದರ್ಭಿಕ ಕವನ ನಿಮ್ಮ ಶ್ರೀಸುತ ಜಾಲತಾಣದಲ್ಲಿ...

Please share and support me

7 comments:

 1. ನಿಜವಾಗಿಯೂ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಅಭಿನಂದನೆಗಳು.

  ReplyDelete
  Replies
  1. ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ

   Delete
 2. ಅರ್ಥಗರ್ಭಿತವಾಗಿದೆ..

  ReplyDelete
 3. Superb....well written..keep it up ..

  ReplyDelete
 4. ಧನ್ಯವಾದಗಳು

  ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.