ಮತ್ತೆ ಬೀಸು ಗಾಳಿಯೇ


ಭಾವಗೀತೆ ೯ - ಮತ್ತೆ ಬೀಸು ಗಾಳಿಯೇ

ಮತ್ತೆ ಏಕೆ ಗಾಳಿ ಬೀಸಿ
ನನ್ನ ಮನವ ಕದಡಿದೆ
ಬೆಂಕಿ ಏರಿ ತಾಪ ಸೋರಿ
ಕಣ್ಣಹನಿಯು ಆರಿದೆ ||ಪ||

ಇರುಳಿನಲ್ಲಿ ಸುರಿವ ಮಳೆಯು
ನೋವ ನೆಲವ ಹಿಂಡಿದೆ
ಕತ್ತಲಾಟದಲ್ಲಿ ಕನಸು
ಬೆಚ್ಚಿಬಿದ್ದು ನಲುಗಿದೆ ||೧||

ರವಿಯಕಿರಣದಲ್ಲಿ ಬೇಗೆ
ಹೃದಯವನ್ನು ಸುಡುತಿದೆ
ನೆರಳಿಗಾಗಿ ನನ್ನ ಮನವು
ಲೋಕವನ್ನೆ ಹುಡುಕಿದೆ ||೨||

ಅವನ ಮೌನ ತೋಟದಲ್ಲಿ
ಹೂವು ನಾನು ಎಂದಿಗೂ
ಸ್ಪರ್ಶವಿಲ್ಲದಾದರೇನು
ಬೇಕು ಹೂ ಸಮಾಧಿಗೂ ||೩||

ಮರೆಯಲಾರೆನವನ ಸನಿಹ
ಮತ್ತೆ ಬೀಸು ಗಾಳಿಯೇ
ಎದೆಯಲುರಿವ ಬೆಂಕಿಯನ್ನು
ಆರದಂತೆ ಮೇಲೆಯೇ  ||೪||

                               -ಶ್ರೀಸುತ

■ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

Photo Credit: pinterest

ಭಾವಗೀತೆ ೮ - "ಮೌನಿ ನಾನು"ಯನ್ನು ಓದಲು ಭಾವಗೀತೆ ೮ ಕ್ಲಿಕ್ ಮಾಡಿ.


Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.