ಮೌನಿ ನಾನು


ಭಾವಗೀತೆ ೮ - ಮೌನಿ ನಾನು

ಎಷ್ಟು ಬೆಳಕು ಚೆಲ್ಲುತಿದ್ದೆ
ಹೃದಯಗುಡಿಯ ಮೂರ್ತಿಗೆ
ಇಷ್ಟು ಬೇಗ ಹೇಗೆ ಕವಿದೆ
ಹೃದಯ ಸ್ಪೂರ್ತಿಗೆ ||ಪ||

ಮೋಡ ಕವಿದ ಬಾನಿನಲ್ಲಿ
ಮಳೆಯ ಹನಿಯು ಆರಿದೆ
ಮೌನವಾಗಿ ಅಳುತಲಿಹುದು
ಇಳೆಯನಪ್ಪದೆ ||೧||

ಹೊತ್ತಿ ಉರಿದ ದೀಪವೊಂದು
ಆರುವಂತೆ ತೋರಿದೆ
ಹತ್ತಿ ನಿಂತ ಪ್ರೇಮಬಿಂದು
ಭಾರವಾಗಿದೆ ||೨||

ಮೌನವೆಂಬ ನಾದವಿಂದು
ಎದೆಯ ಕದವ ಬಡಿದಿದೆ
ಮೌನಿ ನಾನು ಜ್ಞಾನಿ ನೀನು
ದಾರಿ ತೋರದೆ ||೩||

                               -ಶ್ರೀಸುತ

■ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

Photo Credit: style arena

ಭಾವಗೀತೆ ೭ - "ಪ್ರೀತಿಧಾರೆ"ಯನ್ನು ಓದಲು ಭಾವಗೀತೆ ೭ ಕ್ಲಿಕ್ ಮಾಡಿ.


Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.