೧. ಅಸಿ-ಮಸಿ-ಕೃಷಿ
ನಮ್ಮ ನೆಮ್ಮದಿಗೆ ಬೇಕು ಅಸಿ-ಮಸಿ-ಕೃಷಿ
ಅಸಿ ಎಂದರೆ ಯುದ್ಧ ಎಂದರೆ ಯೋಧರು
ಮಸಿ ಎಂದರೆ ಸಾಹಿತ್ಯ, ಸೃಜಿಪ ಕವಿ ರಸಋಷಿ
ಕೃಷಿಕರು ಮಣ್ಣಿನ ಮಕ್ಕಳು, ಅನ್ನದಾತರು
ಈ ಮೂವರು ಸರ್ವಸ್ವ, ಬದುಕಿನ ಉಸಿರು.
೨. ಭಾಷಾ ಪ್ರೇಮ
ಸಂಸ್ಕೃತದ ಮಂತ್ರಗಳನು
ಕನ್ನಡದಲಿ ಹೇಳುವವರು
ಆಡುವರು ಪ್ರಾಸಬದ್ಧ ಮಾತುಗಳನು
ಮನೆ ಮಾತು ತಮಿಳು, ಆದರೂ
ಅನ್ನ ನೀಡಿದ ಕನ್ನಡ ವನು
ತು೦ಬಾ ಮೆಚ್ಚಿ ಗೌರವಿಸುವರು
ಅಹಂ ಇನಿತು ತೋರದವರು
ಕಾವ್ಯಗಳ ಸಾಲುಗಳ ಉದ್ಧರಿಸುವವರು
ಬಲ್ಲಿರೇನು? ಇವರು ಯಾರು?
ಹಿರೇಮಗಳೂರ, ಕಣ್ಣನ್ ಅವರು .
೩. ಸೊಳ್ಳೆ
ಮಳೆಗಾಲದಲ್ಲಿ ಎಲ್ಲೆಲ್ಲೂ ಸೊಳ್ಳೆಗಳ ಸಂತಾನ
ಸಂಜೆ ಆಯಿತೆಂದರೆ ಅದರ ಸಂಗೀತಾಲಾಪನೆ
ಕಚ್ಚಿದರೆ ಮಲೇರಿಯಾ ಡೆಂಗ್ಯುರೋಗ ಪ್ರದಾನ
ಶಸ್ತ್ರಗಳೆಷ್ಟಿದ್ದರೂ ಕಷ್ಟ ಈ ಪೀಡೆಯ ನಿರ್ಮೂಲನೆ.
೪. ಉನ್ಮಾದ
ಭಾರತ ಪಾಕ್ ಕ್ರಿಕೆಟ್ ಪಂದ್ಯ ಸುರು ಆದರೆ
ಎರಡೂ ದೇಶಗಳಲ್ಲಿ ಭಾರೀ ಯುದ್ಧದುನ್ಮಾದ
ಕ್ರಿಕೆಟ್ಟು ಹತ್ತರೊಟ್ಟಿಗೊಂದು ಕ್ರೀಡೆ, ಇದನರಿತರೆ
ಸೋಲು ಗೆಲುವುಗಳಿಂದಾಗದು ಪ್ರಮಾದ.
೫. ಪ್ರಾಣಾಯಾಮ
ಪ್ರತಿನಿತ್ಯ ಮಾಡಿ ಯೋಗ, ಪ್ರಾಣಾಯಾಮ
ಇದರಿಂದ ನಮ್ಮ ಬದುಕಾಗುವುದು ಆರಾಮ
ಬೇಡವೇ ಬೇಡ ಕ್ಲೇಶ ಶೇಷ ವಿಷಮ ವಿರಸ
ಬೇಕು ಈ ಜಂಜಾಟದ ಬದುಕಿನಲಿ ಸರಸ.
-ಗುಣಾಜೆ ರಾಮಚಂದ್ರ ಭಟ್
ಗುಣಾಜೆ ಚಂದ್ರಮ - ೨ ನ್ನು ಓದಲು ಮುಂದಿನ ಲಿಂಕ್ ಗೆ ಭೇಟಿ ನೀಡಿ -
ಚಂದ್ರಮ ೨
About the Author
ಹೆಸರು : ಶ್ರೀ ಗುಣಾಜೆ ರಾಮಚಂದ್ರ ಭಟ್.
▪ಶ್ರೀಯುತರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ಈಗ ಸಾಹಿತ್ಯದೊಂದಿಗೆ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.
ಅದಲ್ಲದೆ ಚುಟುಕ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಸದಸ್ಯರಾಗಿರುವ ಇವರು 2014 ರಲ್ಲಿ "ಎದೆಯ ದನಿ" ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದರ 300 ಪ್ರತಿಗಳನ್ನು ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯು ಆಯ್ಕೆ ಮಾಡಿಕೊಂಡುದು ಇವರ ಹಿರಿಮೆಗೊಂದು ಗರಿ. ಅತ್ಯುತ್ತಮ ಶಿಕ್ಷಕರಾಗಿದ್ದ ಇವರು 2014ನೇ ಸಾಲಿನ ದಕ್ಷಿಣಕನ್ನಡ ಜಿಲ್ಲಾ ಮಟ್ಟದ "ಅತ್ಯುತ್ತಮ ಜಿಲ್ಲಾ ಶಿಕ್ಷಕ" ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಕವಿಗೊಷ್ಟಿಗಳಲ್ಲಿ ಭಾಗವಹಿಸಿರುವ ರಾಮಚಂದ್ರ ಭಟ್ಟರು ಕನ್ನಡ, ಹವಿಗನ್ನಡ ಹಾಗೂ ತುಳು ಭಾಷೆಗಳಲ್ಲಿ ತಮ್ಮದೇ ಶೈಲಿಯ ಸಾಹಿತ್ಯ ಸಿಂಚನವನ್ನು ಪಸರಿಸುತ್ತಿದ್ದಾರೆ.
ಇದೀಗ ನಮ್ಮ ಈ ಜಾಲದಲ್ಲಿ "ಗುಣಾಜೆ ಚಂದ್ರಮ" ಎಂಬ ಹೆಸರಿನಲ್ಲಿ ಅವರ ಚುಟುಕಗಳನ್ನು ನೀವು ಓದಬಹುದು...
ವಿಳಾಸ:
ಕವನ ಸದನ
ದೇರಳಕಟ್ಟೆ ಅಂಚೆ
ಬೆಲ್ಮ ಗ್ರಾಮ
ಮಂಗಳೂರು ತಾಲೂಕು
ದ.ಕ 575018
ದೂರವಾಣಿ : +919743902522
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.