ದರ್ಪಣ ೬ - ನಂಬುವವರಾರು?
ಕಂಡುದನ್ನು ಕಂಡಂತೆ
ಹೇಳುತ್ತೇನೆ ಕೇಳಿ-
ದ್ದನ್ನು ಕೇಳಿದಂತೆ
ಹೇಳುತ್ತೇನೆ ಎಂದರೆ
ನಂಬುವವರಾರು?
ಅದನ್ನೇ ಸುಳ್ಳು ಎಂಬರು
ಮೂರ್ಖ ಜಗತ್ತಿನಲ್ಲಿ.
ದರ್ಪಣ ೭ - ಪಂಜರ
ದೂಡಬೇಡಿ ನನ್ನನ್ನ
ಕಟು ಪಂಜರದೊಳಗೆ
ನಿಮ್ಮ ಹಿಂದೆಯೂ
ಇಹುದೊಂದು ಪಂಜರ
ಸೆಳೆವುದೊಂದೇ ಬಾಕಿ
ದರ್ಪಣ ೮ - ಒಂದೇ(?)
ನಾವೆಲ್ಲಾ ಒಂದೇ ಅಂದವರು
ನಾನು ನನ್ನದು
ನೀನು ನಿನ್ನದು
ಎಂದರು...
ಹೋಳಾಯಿತು.
ದರ್ಪಣ ೯ - ಮುದುವೆ ಲೈಫ್
ನಿನ್ನೆ ನಿಶ್ಚಿತಾರ್ಥ
ಇಂದು ಮದುವೆ
ನಾಳೆ ಹನಿಮೂನ್
ನಾಡಿದ್ದು ಜಗಳ
ಮಾರನೆ ದಿನ
ಅವರವರ ಮನೆಗೆ!!!
ದರ್ಪಣ ೧೦ - ????
ನಾನು ನಾನಾಗಿದ್ದಾಗ
ನೀನು ನೀನಾಗಿರಲಿಲ್ಲ
ನೀನು ನೀನಾಗುವ ವೇಳೆ
ನನ್ನಲ್ಲಿ ನಾನೇ ಇರಲಿಲ್ಲ.
-ಶ್ರೀಸುತ
Photo Credit: marksandspencer
ದರ್ಪಣ - ಬಿಂಬ ೧ ನ್ನು ಓದಲು ಈ ಮುಂದಿನ ಲಿಂಕ್ ಗೆ ಭೇಟಿ ನೀಡಿ - ಬಿಂಬ ೧
ಚೆನ್ನಾಗಿದೆ ☺👍
ReplyDeleteಧನ್ಯವಾದಗಳು ಹೆಗಡೆಯವರೇ
Delete