ಭಾವಗೀತೆ ೨ - ಪ್ರೇಮಾಶ್ರಯ
ಮುಚ್ಚಿದೊಡನೆ
ಕಣ್ಣ ರೆಪ್ಪೆಗಳು
ಮತ್ತೆ ಅರಳುವ ಕಾತುರದೊಳಗೆ |
ಹೆಚ್ಚಿ ಒಲವಿನ
ದೃಶ್ಯ ಸುಮಗಳು
ಸುತ್ತೇಳು ಲೋಕದ ಪರಿಮಳದೊಳಗೆ ||
ಚೆಲುವೆ ನಿನ್ನಯ
ಅಚ್ಚು ಮೂಡಿದೆ
ಮೆಚ್ಚಿಕೊಂಡ ಈ ಹೃದಯದೊಳಗೆ |
ನಿಲುವೆನೊಂದಿಗೆ
ಪ್ರೇಮದಿಂದಲಿ
ಹಚ್ಚಿ ಪ್ರೀತಿಯ ಸ್ನೇಹದೊಳಗೆ ||
ನೋಡುನೋಡುತ
ಮರೆತೆನೆನ್ನನು
ಕರೆದು ತಾ ನಗುವೊಂದನಿಂದು |
ಬಾಡುವುದು
ನೀ ಬಾರದಿರೆ
ತೆರೆಬೀಳುವುದು ಈ ಜೀವಕಿಂದು ||
ಅರಳು ಮಲ್ಲಿಗೆ
ಸೂಸು ಗಂಧವ
ಅಳಿಸು ನೋವಿನ ಚಿಂತೆಯ |
ಅರಸಿ ಬಂದಿಹ
ಪ್ರೀತಿ ದಾಹವ
ಇಳಿಸು ನೀಡಿ ಪ್ರೇಮಾಶ್ರಯ ||
-ಶ್ರೀಸುತ
Super
ReplyDeleteThank you
DeleteSuper Prema Kavana
ReplyDeleteಧನ್ಯವಾದಗಳು ಪಂಕಜಾ ಮೇಡಮ್
Delete