ಎಲ್ಲಿದೆ ಅಚ್ಛೇ ದಿನ್ ಎನ್ನುವವರಿಗೊಂದು ಲೆಕ್ಕ


          ಶ್ರೀ ನರೇಂದ್ರ ಮೋದಿಯವರ ನೇತೃತ್ವದ
ಎನ್ ಡಿ ಎ ಸರ್ಕಾರ ಇತ್ತೀಚೆಗೆ ಮೂರು ವರ್ಷ ಪೂರೈಸಿತು. ಸ್ವಚ್ಚ ಭಾರತ, ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ, ನೋಟು ಅಪನಗದೀಕರಣ, ಜಿ ಎಸ್ ಟಿ ಹೀಗೆ ಹತ್ತು ಹಲವು ಯಶಸ್ವೀ ಯೋಜನೆಗಳನ್ನು ಜಾರಿಗೊಳಿಸಿ ಜನಮಾನಸದಲ್ಲಿ ಮೋದಿ ಎಂದರೆ ನಂಬಿಕೆ ಎಂದು ಈ ಮೂರು ವರ್ಷದಲ್ಲಿ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಆದರೆ ಯಾವಗಲೂ ಮೋದಿಯವರ ವಿರುದ್ಧ ಕಿಡಿ ಕಾರುತ್ತಲೇ ಇರುವ ಕೆಲ ಬು(ಲ)ದ್ಧಿ ಜೀವಿಗಳು ಮೋದಿಯವರ ಸಾಧನೆ ಶೂನ್ಯ. ಬಾಯಲ್ಲಿ ಮಾತ್ರಾ ಅಚ್ಛೇ ದಿನ್. ಎಲ್ಲಿದೆ ಅಚ್ಚೇ ದಿನ್? ಕೆಲಸಕ್ಕೆ ಬಾರದ ಯೋಜನೆಗಳನ್ನು ತರುತ್ತಿದ್ದಾರೆ, ಮೋದಿಯವರು ಘೋಷಿಸುವ ಯೋಜನೆಗಳೆಲ್ಲವೂ ಹಿಂದಿನ ಕಾಂಗ್ರೇಸ್ ಸರ್ಕಾರದ್ದು ಅಥವಾ ಯಾವುದೋ ಅಪ್ಪ ಮಕ್ಕಳ ಪಕ್ಷದವರಿಂದ ಶಿಲಾನ್ಯಾಸ/ಶಂಕುಸ್ಥಾಪನೆ/ಹಸಿರು ನಿಶಾನೆ ಪಡೆದುಕೊಂಡಿದ್ದು ಎಂದು ಇತಿ ಮಿತಿ ಇಲ್ಲದೆ ಬಾಯಿ ಬಡಿದುಕೊಳ್ಳುತ್ತಾ ಗಂಜಿ ಕೇಂದ್ರದ ಮುಂದೆ ಅಲೆಯುತ್ತಿದ್ದಾರೆ. ಹೀಗಿರುವಾಗ ಜನ ಸಾಮನ್ಯರಿಗೆ ಮೋದಿಯವರ ಯೋಜನೆಗಳ ಫಲಿತಾಂಶ ಏನಾಗಿದೆ ಎಂಬುದು ತಿಳಿಸುವ ಅಗತ್ಯತೆ ಖಂಡಿತವಾಗಿಯೂ ಇದೆ. ಈ ಕಾರಣದಿಂದ ಟ್ವಿಟರ್ ನಲ್ಲಿ  ಡಾ.ಗೌರವ್ ಪ್ರಧಾನ್ ಎಂಬ ವಿಶ್ಲೇಷಕರು ಮೋದಿ ಸರ್ಕಾರದ ಇಲ್ಲಿಯವರೆಗಿನ ಸಾಧನೆಗಳೇನು ಹಾಗೂ ಕಾರ್ಯರೂಪಕ್ಕೆ ತಂದಂತಹ ಯೋಜನೆಗಳ ಫಲಾ ಫಲವೇನು ಎಂಬುದನ್ನು ವಿವರಿಸಿದ್ದಾರೆ. ಅದನ್ನು ಪತ್ರಿಕೆಗಳ ಮೂಲಕ ಜನಸಾಮಾನ್ಯರಿಗೂ ತಲುಪಿಸಬೇಕೆಂಬ ಆಶಯದೊಂದಿಗೆ ಈ ಲೇಖನ.

          ಮೊದಲಿಗೆ ಸ್ವಚ್ಚ ಭಾರತ ಯೋಜನೆಯ ಫಲವಾಗಿ  2014 ರಲ್ಲಿ ಶೇಖಡಾ 42 ರಷ್ಟು ಇದ್ದಂತಹ ನೈರ್ಮಲ್ಯ ವ್ಯಾಪ್ತಿ 2017 ಕ್ಕೆ ಶೇಖಡಾ 64 ಕ್ಕೆ ಏರಿದೆ. 2013-14 ರ ತನಕ ನಮ್ಮ ದೇಶದಲ್ಲಿ 49.76 ಲಕ್ಷ ಶೌಚಾಲಯಗಳಿದ್ದು 2017 ರ ಹೊತ್ತಿಗೆ 2.09 ಕೋಟಿ ಶೌಚಾಲಯಗಳ ನಿರ್ಮಾಣವಾಗಿದೆ. ಆರೋಗ್ಯಕ್ಕೆ ಪೂರಕವಾಗಿರುವ ಸ್ವಚ್ಚತೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿಲ್ಲವೇ? ಹಾಗಿರುವಾಗ ಸ್ವಚ್ಚ ಭಾರತ ಒಂದು ಅಭೂತಪೂರ್ವ ಯಶಸ್ಸನ್ನು ಕಂಡ ಯೋಜನೆಯಾಗಲಿಲ್ಲವೇ? 2014 ರ ವರೆಗೆ 2621 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುತ್ತಿದ್ದ ಭಾರತ ಇಂದು  ಪರಿಸರ ಸ್ನೇಹಿ ಶುದ್ದ ಶಕ್ತಿ ಅಥವಾ ಕ್ಲೀನ್ ಎನರ್ಜಿ ಯೋಜನೆಯ ಫಲವಾಗಿ 12277 ಮೆಗಾ ವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸುತ್ತಿದೆ. 2004 - 2014 ರವರೆಗೆ  5.3 ಕೋಟಿ ಕುಟುಂಬಗಳು ಎಲ್ ಪಿ ಜಿ ಗ್ಯಾಸ್ ನ ಸೌಲಭ್ಯ ಹೊಂದಿದ್ದು 2014 - 2017 ಕ್ಕೆ ಭಾರತದ 6.95 ಕೋಟಿ ಕುಟುಂಬಗಳು ಗ್ಯಾಸ್ ಸುಲಭ್ಯವನ್ನು ಹೊಂದಿದ್ದಾವೆ. 2011 ರಿಂದ 2014 ರವರೆಗೆ ಭಾರತದಲ್ಲಿ ನಿರ್ಮಿತವಾದ ರಸ್ತೆಯ ಉದ್ದ 81,095 ಕಿ.ಮೀಗಳು. ಅದರೆ 2014 ರಿಂದ 2017 ರವರೆಗೆ ನಿರ್ಮಾಣವಾಗಿದ್ದು  1,20,233 ಕಿ.ಮೀ ಉದ್ದದ ರಸ್ತೆ. ಮೊದಲಿಗೆ ದಿನಕ್ಕೆ 6 ಕಿ.ಮೀ ನಿರ್ಮಾಣಗೊಳ್ಳುತ್ತಿದ್ದ ರಸ್ತೆ  ಈಗ ದಿನಕ್ಕೆ 21-23 ಕಿಮೀ ಗಳಷ್ಟು ನಿರ್ಮಿಸುವ ಗುರಿಯಲ್ಲಿ ಸಫಲತೆಯನ್ನು ಕಂಡುಕೊಂಡಿದ್ದೇವೆ.

          2014  ರಲ್ಲಿ 11,198 ಕೋಟಿ ಮೊತ್ತದ ವಿದ್ಯುನ್ಮಾನ ಉಪಕರಣಗಳನ್ನು ತಯಾರುತ್ತಿದ್ದ ಭಾರತ ಇಂದು ಮೇಕ್ ಇನ್ ಇಂಡಿಯಾ ಯೋಜನೆಯ ಫಲವಾಗಿ 1,43,000 ಕೋಟಿ ಮೊತ್ತದ ಉಪಕರಣಗಳನ್ನು ಉತ್ಪಾದಿಸುತ್ತಿದೆ. ಕಲ್ಲಿದ್ದಲು ಹಗರಣದದಿಂದ ಮುಖಕ್ಕೆ ಮಸಿ ಬಳಿದುಕೊಂಡಿದ್ದ ಆಗಿನ ಕೇಂದ್ರ ಸರ್ಕಾರ 2013-14 ರಲ್ಲಿ ಉತ್ಪಾದಿದ ಕಲ್ಲಿದ್ದಲಿನ ಪ್ರಮಾಣ 462 ಮಿಲಿಯನ್ ಟನ್. ಆದರೆ ನಂತರ ಬಂದ ಸರ್ಕಾರ 2016-17 ರಲ್ಲಿ ಉತ್ಪಾದಿಸಿದ್ದು 554 ಮಿಲಿಯನ್ ಟನ್. 2013-14 ರಲ್ಲಿ ಆಪ್ಟಿಕಲ್ ಫ಼ೈಬರ್ ನೆಟ್ವರ್ಕ್ ನ ಸೇವೆ ಹೊಂದಿದ್ದು ಕೇವಲ 358 ಕಿ.ಮೀ ಆದರೆ ಇಂದು ಭಾರತದಾದ್ಯಂತ 2,05,404 ಕಿ.ಮೀಗಳಷ್ಟು ಈ ಸೌಲಭ್ಯವನ್ನು ಹೊಂದಿದ್ದೆವೆ. ವಲ್ಡ್ ಎಕೋನಾಮಿ ಫ಼ೋರಮ್ ನ ಪ್ರವಾಸಿ ರ್ಯಾಂಕಿಂಗ್ ನಲ್ಲಿ 2014 ರಲ್ಲಿ 65 ನೇ ಸ್ಥಾನದಲ್ಲಿದ್ದ ಭಾರತ ಇಂದು ಇನ್ಕ್ರೇಡಿಬಲ್ ಇಂಡಿಯಾ ಯೋಜನೆಯಿಂದಾಗಿ 40 ನೇ ಸ್ಥಾನಕ್ಕೆ ಬಂದಿದೆ. ವಿಶ್ವ ಬ್ಯಾಂಕ್ ನ ವ್ಯಾಪಾರದ ರ್ಯಾಂಕಿಂಗ್ ನಲ್ಲಿ 2014 ರಲ್ಲಿ 142 ನೇ ಸ್ಥಾನದಲ್ಲಿದ್ದ ಭಾರತ ಇಂದು 130 ನೇ ರ್ಯಾಂಕ್ ಪಡೆದಿದೆ. 2014 ರಲ್ಲಿ ಶೇಖಡಾ 11 ರಷ್ಟಿದ್ದ ಹಣದುಬ್ಬರ ಇಂದು ಶೇಖಡಾ 4 ಕ್ಕೆ ಇಳಿದಿದೆ.2014 ರಲ್ಲಿ ಹಣಕಾಸಿನ ಕೊರತೆಯ ಪ್ರಮಾಣ ಶೇಖಡಾ 4.6 ರರಷ್ಟಿದ್ದು ಇಂದು ಅದರ ಪ್ರಮಾಣ ಶೇಖಡಾ 3.2 ಕ್ಕೆ ಇಳಿದಿದೆ.2014 ರಲ್ಲಿ ಶೇಕಡ  6.6 ರಷ್ಟಿದ್ದ ಜಿಡಿಪಿ ಇಂದು ಪ್ರಸ್ತುತ ಶೇ.7.1 ಕ್ಕೆ ತಲುಪಿದೆ. 2014 ರಲ್ಲಿ ಭಾರತದ 18452 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಆದರೆ ಇಂದು ನಮ್ಮ ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳ ಸಂಖ್ಯೆ ಕೇವಲ 3937 ಮಾತ್ರಾ, ಬರುವ ದಿನಗಳಲ್ಲಿ ಈ ಲೆಕ್ಕ ಗ್ರಾಮ ವಿದ್ಯುತ್ತೀಕರಣ ಯೋಜನೆಯ ಫಲವಾಗಿ ಶೂನ್ಯಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

         ಇದಿಷ್ಟೇ ಅಲ್ಲದೇ ರೈಲ್ವೇ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಗಳು ಕಂಡಿವೆ. ತುರ್ತು ಸಹಾಯವಾಣಿ ಅಥವಾ ಟ್ವಿಟರ್ ಮೂಲಕ ರೈಲ್ವೇ ಮಂತ್ರಿಗಳನ್ನು ಸಂಪರ್ಕಿಸಬಹುದಾಗಿದೆ. ಸೇನೆಯಲ್ಲಂತೂ ಗರಿಷ್ಠ ಮಟ್ಟದ ಅಭಿವೃದ್ಧಿಗಳಾಗಿವೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದೇವೆ. ಪದೇ ಪದೇ ತಂಟೆ ಮಾಡುವ ಪಾಪಿ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮಾಡುವುದರ ಮೂಲಕ ಎಚ್ಚರಿಕೆಯ ಸಂದೇಶವನ್ನು ತಲುಪಿಸಿಯಾಗಿದೆ. ಹಿಂದೆ ಪಾಕಿಗಳು ನಮ್ಮ ದೇಶದ ಸೈನಿಕರ ತಲೆ ಕಡಿದರೆ ಆಗಿನ ಸರ್ಕಾರ ಶಾಂತಿ ಎಂದು ಕ್ರಿಕೇಟ್ ಆಡಲು ಆಹ್ವಾನಿಸುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನಮ್ಮ ದೇಶದ ಸೈನಿಕರ ಮೆಲೆ ದಾಳಿ ಮಾಡಿದರೂ ಕೂಡಾ ನಿಮ್ಮ ದೇಶದ ಸೈನಿಕರ ಪ್ರಾಣ ತೆಗೆಯುತ್ತೇವೆ ಎಂಬುದನ್ನು ಸ್ವತಹ ಮಾಡಿ ತೋರಿಸಲಾಗಿದೆ. ಗಡಿ ರಕ್ಷಣಾ ಪಡೆಗಳ ಮೇಲೆ ಮಾರಣ ಹೋಮ ನಡೆಸಿದ ಉಗ್ರರಿಗೆ ಮಯನ್ಮಾರ್ ಗೆ ನುಗ್ಗಿ ಪಾಠ ಕಲಿಸಿ ಬಂದಿದ್ದೂ ಆಗಿದೆ. ಎಲ್ಲಾ ದೇಶಗಳ ಜೊತೆ ಸ್ನೇಹ ಹಸ್ತ ಚಾಚುತ್ತಾ, ಸ್ನೆಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂಬ ಸಂದೇಶ ಇಡೀ ವಿಶ್ವಕ್ಕೇ ಮುಟ್ಟಿದೆ. ಭಾರತ ದೇಶದ ಸಂಸ್ಕೃತಿ ಪ್ರಾಚೀನವಾದ ಯೋಗವನ್ನು ಇಡೀ ವಿಶ್ವವೇ ಮಾಡುವ ಹಾಗೇ ನಮ್ಮ ಹೆಮ್ಮೆಯ ಪ್ರಧಾನಿ ಮಾಡಿದ್ದಾರೆ. ಇನ್ನೆಂತಹ ಒಳ್ಳೆಯ ದಿನಗಳು ಅಥವಾ ಅಚ್ಛೇ ದಿನ್ ಬೇಕು?

         ಇಷ್ಟೆಲ್ಲಾ ಆಗಿಯೂ ಭಾರತ ಹಾಗೂ ಮೋದಿ ಸರ್ಕಾರ ಏನು ಎಂಬುದು ಇಡೀ ಪ್ರಪಂಚಕ್ಕೇ ಗೊತ್ತಾಗಿದ್ದರೂ ಕೂಡಾ ನಮ್ಮ ದೇಶದ ಕೆಲ ಕಚ್ಚೆ ಹರುಕರಿಗೆ ಮಾತ್ರಾ ಅಧಿನಾಯಕಿಯ ಪಾದ ನೆಕ್ಕುವ ಕೆಲಸದೊಂದಿಗೆ ದೇಶದ ಜನರಿಂದ ಆರಿಸಲ್ಪಟ್ಟ ಮಹಾನ್ ನಾಯಕನನ್ನು ಹಳಿಯುವುದು ಬಿಟ್ಟು ಬೇರೇನೂ ಇದ್ದಂತೆ ಕಾಣುವುದಿಲ್ಲ.ಅದೇನೇ ಇರಲಿ ಒಳ್ಳೆಯದು ನಡೆಯುತ್ತಿದ್ದರೆ ಅದನ್ನು ವಿರೋಧಿಸುವವರು ಆ ಕಾರ್ಯಕ್ಕೆ ಕಲ್ಲು ಹಾಕುವವರು ಇದ್ದೇ ಇರುತ್ತಾರಲ್ಲವೇ ಹಾಗೆಯೇ ಇವರುಗಳೂ ಕೂಡಾ. ಇವರನ್ನೆಲ್ಲಾ ಲೆಕ್ಕದಿಂದ ಹೊರಗಿಟ್ಟು ಅಭಿವೃದ್ದಿಯ ಕೆಲಸ ಮಾಡುತ್ತಿರುವ ಸರ್ಕಾರವನ್ನು ಅಭಿನಂದಿಸೋಣ, ಬೆಂಬಲಿಸೋಣ.

                                     -ನಾಗರಾಜ ಭಟ್ ಟಿ ಆರ್

Photo Credit: India Today

Author image
About the Author
ಹೆಸರು:ಶ್ರೀ ನಾಗರಾಜ ಭಟ್ ಟಿ ಆರ್.
▪ಶ್ರೀ ನಾಗರಾಜ ಭಟ್ಟರು ಜನಿಸಿದ್ದು ಶೃಂಗೇರಿಯಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಸಮೀಪದ ಹಳುವಳ್ಳಿಯವರಾದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ತಮ್ಮ ತಾಯಿನೆಲೆಯಲ್ಲಿಯೇ ಪೂರೈಸಿದರು. ಆನಂತರ ಪದವಿ ಪೂರ್ವ ವ್ಯಾಸಾಂಗಕ್ಕಾಗಿ ದೂರದ ಮೈಸೂರನ್ನು ಪ್ರವೇಶಿಸಿದ ಇವರು ಅಲ್ಲಿಯ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದೊಂದಿಗೆ ಪಿ.ಯು ಹಂತವನ್ನು ಮುಗಿಸಿದರು. ತದನಂತರ ಮೈಸೂರಿನ ಯುವರಾಜ ಕಾಲೇಜಿನಲ್ಲಿ BCA ಪದವಿ ವ್ಯಾಸಾಂಗವನ್ನು ಮುಗಿಸಿದರು. ಇವರು ಓರ್ವ ಬಹುಮುಖ ಪ್ರತಿಭೆ. ಕ್ರೀಡೆ, ಸಾಹಿತ್ಯ,ನಾಟಕ, ಯಕ್ಷಗಾನ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದು ಇದುವರೆಗೆ ಹಲವಾರು ಕಥೆ, ಕವನ, ಲೇಖನಗಳನ್ನು ಬರೆದಿದ್ದಾರೆ. ಇವರ ಬರಹಗಳು ಹೊಸದಿಗಂತ, ವಿಶ್ವವಾಣಿ, ರೀಡೂ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ತನ್ನದೇ ಒಂದು ಅಂತರ್ಜಾಲ ತಾಣವನ್ನೂ ಹೊಂದಿದ್ದಾರೆ. ನಾಟಕದಲ್ಲಿ ಅತ್ಯಂತ ಹೆಚ್ಚಿನ ಆಸಕ್ತಿಯನ್ನು ಹೊಂದಿದ ನಾಗರಾಜರು ಇದುವರೆಗೆ ೧ ಕನ್ನಡ ನಾಟಕವನ್ನು ಬರೆದಿದ್ದು, ೩ ನಾಟಕಗಳನ್ನು ನಿರ್ದೇಶಿಸಿದ್ದಲ್ಲದೆ ೧೦ಕ್ಕೂ ಮಿಗಿಲಾಗಿ ನಾಟಕಗಳಲ್ಲಿ ಭಾಗವಸಿದ ಕೀರ್ತಿ ಇವರದು. ಕಾಲೇಜು ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಇವರದು ರಸಪ್ರಶ್ನೆಯಲ್ಲೂ ಎತ್ತಿದ ಕೈ. ಮೈಸೂರಿನ "ನಿರಂತರ" ಎಂಬ ಕಲಾತಂಡದ ಸದಸ್ಯನಾಗಿದ್ದುಕೊಂಡು ಮೈಸೂರಿನ ಹಲವು ನಾಟಕಗಳಲ್ಲಿ ಭಾಗವಹಿಸಿ ಅನುಭವ ಹೊಂದಿದ್ದು ತನ್ನದೇ ಊರಿನಲ್ಲಿ "ಸಂಚಲನ" ಎಂಬ ಗೆಳೆಯರ ತಂಡವೊಂದನ್ನು ಸ್ಥಾಪಿಸಿ ಹಲವಾರು ನಾಟಕಗಳನ್ನು ನಡೆಸಿದ್ದಾರೆ. ಸಂಗೀತದಲ್ಲೂ ಮನಹಾಸಿರುವ ಇವರು ಪ್ರಸ್ತುತ ವಿದ್ವಾನ್ ಎ ವಿ ದತ್ತಾತ್ರೇಯ ಭಟ್ ಇವರ ಬಳಿ ಶಾಸ್ತ್ರೀಯ ಕೀಬೋರ್ಡ್ ವಾದನವನ್ನು ಅಭ್ಯಸಿಸುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶಿಕ್ಷಣವನ್ನು ಪೂರೈಸಿರುವ ನಾಗರಾಜರು ಮೈಸೂರಿನ ಇನ್ಫೋಸಿಸ್ ಕಂಪೆನಿಯಲ್ಲಿ ತನ್ನ ವೃತ್ತಿಬದುಕನ್ನು ನಡೆಸುತ್ತಿದ್ದಾರೆ. ಇವರ ಬರಹಗಳನ್ನು ನಮ್ಮ ಜಾಲತಾಣದಲ್ಲಿ ಓದಬಹುದು.
ದೂರವಾಣಿ: 9535496746
ಅಂತರ್ಜಾಲ ತಾಣ: ಮಾತೃಭೂಮಿಗೆ ನಮನ

Please share and support me

1 comment:

  1. Get a $200 Bonus at Harrah's Casino in Las Vegas
    The febcasino.com new 도레미시디 출장샵 Harrah's Casino aprcasino is one of the most well-known Las Vegas-style casino https://septcasino.com/review/merit-casino/ resorts. It features a full-service spa, a herzamanindir.com/ full-service spa and

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.