ಪ್ರೇಮಗೀತೆ ೨
ಕಣ್ಣು ಕಣ್ಣು ಮಾತಾಡಿದೆ
ಏನೋ ಬೇಕು ಎಂದು
ಹೇಳು ಹೆಣ್ಣೆ ಕಣ್ಣಾಡಿದ
ಮಾತು ಏನು ಎಂದು
ಇನಿಯನೇ ಕೇಳು ಮನ ಹೇಳದೇ
ನನ್ನೆದೆ ಮಾತಾಡಿದೆ...
ಗೆಳತಿಯೇ ನನ್ನ ಮನ ಹೇಳಿದೆ
ನಿನ್ನೆದೆ ನನ್ನೊಳಗಿದೆ...
ಪ್ರೀತಿ ಗುಟ್ಟೆಲ್ಲಾ ರಟ್ಟಾಗಿದೆ...
ಇಬ್ಬನಿ ತಬ್ಬಿದ ಹೂವಿನಲಿ
ನಿನ್ನದೇ ಚೆಲುವಿದೆ
ಲೇಖನಿ ಹಿಡಿದರೆ ಪುಟಗಳಲಿ
ನಿನ್ನದೇ ಸಾಲಿದೆ
ನೀ ಬರೆದ ಸಾಲುಗಳೆಲ್ಲಾ
ಹೃದಯದಲಿ ಸೇರಿದೆ
ನಾನದರ ಓದುವ ಮೊದಲೆ
ಮನಸು ಅರಿತಾಗಿದೆ
ಕನಸುಗಳು ಈಗ ಜೋಡಿಯಾಗಿ ಸಾಗಿವೆ...
ನಿನ್ನಯ ಪರಿಚಯ ಪ್ರೀತಿಯಲಿ
ಕಾಡಿತು ಹೊಸಥರ
ನಾಳೆಯ ಜೀವನ ಪ್ರೇಮದಲಿ
ಸೋಕಿತು ಈ ಥರ
ನೀ ಬಂದ ವೇಳೆಗೆ ನಾನು
ಒಬ್ಬಂಟಿಯಾಗಿದ್ದೆ
ಪ್ರೀತಿಯನು ಕಲಿಸಿ ನೀನು
ನವಿರಾಗಿ ಮನ ಕದ್ದೆ
ಮನಸುಗಳು ಈಗ ಜೋಡಿಯಾಗಿ ಸಾಗಿವೆ...
-ಶ್ರೀಸುತ
Photo Credit: Inkedweddings
ಈ ಹಾಡನ್ನು Youtube ನಲ್ಲಿ ಕೇಳಲು ಕ್ಲಿಕ್ ಮಾಡಿ - ಕಣ್ಣು ಮಾತಾಡಿದೆ
ಪ್ರೇಮಗೀತೆ ೧ - "ಭಾವತುಂಬಿ ನನ್ನ ಮೊಗವು" ಹಾಡನ್ನು ಓದಲು ಪ್ರೇಮಗೀತೆ ೧ ನ್ನು ಕ್ಲಿಕ್ ಮಾಡಿ.
ಪ್ರೇಮಗೀತೆ ಲಾಯಿಕಿದ್ದು ಪ್ರೇಮಿಗಳ ಭಾಷೆ ಕಣ್ಣಿನ ಬಾಷೆ ಪ್ರೇಮ ಕವಿಗೆ ಶುಭವಾಗಲಿ ಬಾಳೆಲ್ಲ ಪ್ರೇಮಮಯವಾಗಲಿ
ReplyDeleteಧನ್ಯವಾದಗಳು😊
Delete