ಯುಗದ ಆದಿಗೆ
ಸ್ವಾಗತ ಬಯಸಿ
ಸದ್ದಿಲ್ಲದೆ ಸುರಿದಿದೆ ಸೋನೆ
ಧರೆಯ ದಗೆ ನೀಗಿಸಿ
ಮಣ್ಣಿನ ಪರಿಮಳವ
ಮೂಗಿಗೆ ವರೆಸಿ
ಧೂಳು ಹಿಡಿದ ನೆಲಕೆ
ಚಿಮು,ಚಿಮು ಹನಿಸಿಂಪಡಿಸಿ,
ಉಗಾದಿಗೆ ಉಡುಗೊರೆ ನೀಡಿದೆ
ಉಗಾದಿಗೆ,ಗಾದಿ ಹಾಸಿ
ಬರಮಾಡಿಕೊಂಡಿದೆ
ಸಕಲ ಜೀವರಾಶಿ!
ತೆಂಗು,ಬಾಳೆ,ಅಡಿಕೆ
ಪೂಜೆಗೊಂದು ಮಡಿಕೆ..
ಮಾವು, ಬೇವು ಬೆಲ್ಲ
ಬಿಸಿ ನೀರು , ಎಣ್ಣೆ ಸ್ನಾನ
ಬಯಸಿದೆ ಬಿಗಿದ ಮನ!
ಹೋಳಿಗೆ ತುಪ್ಪ,
ಕುರು, ಕುರು ಸಂಡಿಗೆ
ಹೂಸ ಉಡುಗೆ ತೊಡುಗೆ
ಹಸುಳೆಯು ಬಯಸಿದೆ
ಚಿನ್ನದ ಬಳೆಗಳು...
ದೂರದ ಊರಿನ
ಓರಗಿತ್ತಿಯರು,
ಆಗಮಿಸುವರು
ಹೂಸ ಮನ್ವಂತರದ
ಮೊದಲ ಹಬ್ಬಕೆ
ಹಿರಿಯರು ಮಾಡಿದ
ಹಬ್ಬದ ಹಿಂದೆ,
ಬಂಧ ಬೆಸೆಯುವ ಕಾರಣವೊಂದಿದೆ!
ತಿಳಿದವ ಜಾಣ,ಅರಿಯದವ ಕೋಣ
ಸುಮ್ಮನೆ ದುಡಿದು
ಮಡಿಯುವಿರೇಕೆ?
ಇರುವಾಗ ಕೂಡಿ ಉಂಡು
ನಕ್ಕು ನಲಿಯಬೇಕೆ?
ಕೂಡಲ, ಸೇರಲು
ಕಾರಣವೊಂದಿರಬೇಕು
ಹಬ್ಬ,ಹರಿದಿನ
ಜಾತ್ರೆ ಉತ್ಸವ
ತಿಂದುಡಾಡಲು
ಸಂಬಂಧ ಉಳಿಸಲು
ಉಪಾಯ ಕಲ್ಪಿಸಿ
ಮರೆಯಾದವರು!
ಪೂರ್ವದ ಪುಣ್ಯವ ಹಬ್ಬದಲಿ ಹಂಚಿ,
ಯುಗದ ಆದಿಗೆ ನಾಂದಿ ಬರೆದವರು....
-ಚನಬಸಪ್ಪ ಚೌಗಲಾ
(ವಿಶ್ವಾರಾಧ್ಯ ಪ್ರಿಯ)
Photo Credit: prajavani.net
ತುಂಬಾ ಚೆನ್ನಾಗಿದೆ ವರ್ಣನೆ
ReplyDeleteಪ್ರತಿಕ್ರಿಯೆಗಾಗಿ ಧನ್ಯವಾದಗಳು...
Delete-ದಿವಾಣ ದುರ್ಗಾಪ್ರಸಾದ ಭಟ್ ಕಟೀಲು
ಪ್ರಧಾನ ಸಂಪಾದಕ, ಶ್ರೀಸುತ