ಎಲ್ಲ ಕಹಿ ಘಟನೆಗಳೂ ಕಾಲ
ಗರ್ಭದೊಳಗಡಗಿ ಸಹಜತೆಯನ್ನು ಮರೆತಂತೆ
ಕಾಣುತ್ತಿವೆ.
ಆಗಿರುವ ಘಟನೆಗಳಿಗೆ ಕಾಲವೇ ಸಾಕ್ಷಿ ಎಂಬಂತೆ ಉತ್ತರಕ್ಕಾಗಿ ಕಾಲವೂ ಕೂಡ ಕಾಯುತ್ತಿದೆ.
ಉಸಿರಲ್ಲು ಉಸಿರಾಗಿ ಕಾಯುತಿದ್ದವರೆಲ್ಲ ಉಸಿರನ್ನೇ
ಕೊಂದು ನಿಂತಂತನಿಸುತ್ತಿದೆ.
ಉಸಿರ ಹಿಡಿವ ಕೆಲಸವೂ
ನನ್ನಿಂದೆನ್ನುವುದಲ್ಲವೆಂಬುವುದು ಮನುಜಗೆ ಗೊತ್ತಿಲ್ಲವೆಂದನಿಸುತ್ತಿದೆ.
ಘಟನೆಗಳ ಮಹಾ ಪೂರ ನಮ್ಮೊಳಗಡಗಿ ನಾನು ನೀನೆಂಬ ನನದೆಂಬ ಭೇದ ತೋರುತ್ತಿದೆ.
ಸಾವೇ ಸಾಕ್ಷಿಯಾಗಿ ಕಾಯ್ದು
ಕುಳಿತಿರುವಾಗ ನನ್ನೆದೆಯು
ನಿನ್ನೆದೆಯು ಯಾಕಿಹುದು ಎನ್ನುತ್ತಿದೆ.
ನಾನಿಲ್ಲದಿದ್ದರೂ ನೀನಿರುವೆಯಲ್ಲ ಎಂಬುವುದೇ
ಈ ನಾಟಕದಂತ್ಯವೆಂದು ಹೇಳುತ್ತಿದೆ.
ನಾನು ನಾನೆಂಬ ಮೋಹವಳಿಯದೆ ಇಲ್ಲಿ ಯಾರಿಗಾರಿಲ್ಲವೆಂದು ತೋರುತ್ತಿದೆ.
ಸಾವೆಂಬುದು ಸಹಜ ಸಾವಲ್ಲವದು ಅಹಂಕಾರದಳಿವಿನಾ ಸಾವೆಂದು ಅನಿಸುತ್ತಿದೆ.
ಅಹಂಕಾರವಡಗಿದ ಗರ್ಭದೊಳು ಅದಾವ ಸಾವು
ಹತ್ತಿರ ಬಂದರೂ ಅದು
ಸಾವಲ್ಲವರಿವೆಂದು ಸಾಗುತ್ತಿದೆ.
-ಶಾಂತ ಶಕುಂತಲಾ ಕುಂಟಿನಿ
Photo Credit: fizd.com
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.