ಮಾನವರು ಸಹೋದರರು


ಬೆಳದಿಂಗಳಂತೆ ಮಧು ಶೋಭೆಯಂತೆ ನವ ಬದುಕಿನ ತಾಳಗಳು
ಅನುಭೂತಿಯಿಂದ ಅನುರಾಗವಾಗಿ ಸುಮ ಜೀವನ ಚಲನಗಳು
ಮನಮನವು ಸಹನೆ ತುಂಬಲಿ
ಮತಮತದೆಡೆ ಭೇದ ತೊರೆಯಲಿ
ಕರುಣಾಡಲಿ ಬೇಟೆ ಯಾಕೆರೀ...
ಕೋಮುಗಳು ನಮ್ಮದಲ್ಲರೀ...
ಕರುಣಾಡಿ ಮಣ್ಣು ಭಗವಂತನಾ
ಪುಣ್ಯ ಬಹು ಭೂಮಿಯೇ ಸಿಂಚನಾ (೨)

ಗೆಳೆಯಾ... ಗಳೆಯಾ...
ಕೈಜೋಡಿಸು ಬಾ... ಶಾಂತಿಯ ದೀಪಾ ಬೆಳಗಿಸುವ ಬಾ...
ಮನಮಾನಸದಾ... ನವಭಾವನೆಯಾ...
ಮಧುಶೋಭೆಗಳಾ ತೆರೆಯೋಣಾ ಬಾ(೨)
ಮನದಿಂದ ಬರುತಿಹ ಶ್ವಾಸೋಚ್ಚಾಸವು ಒಂದೇ ನಮಗೆಲ್ಲ...
ನರದಿಂದ ಬರುತಿಹ ರಕ್ತದ ಕಣಗಳು ಕೆಂಪೇ ನಮದೆಲ್ಲಾ...

ಪೂರ್ವಜರಂದು ತೋರಿಸಿದ
ಸಹಬಾಳ್ವೆಯಿಂದ ಬಾಳುವ ಬಾ
ಬಸವಣ್ಣನವರುಗಳು ನುಡಿದಿರುವ ಮಧುನೀತಿಯ ಮಾತನು ನೆನೆಯುವುದು ಬಾ
ಶಾಂತಿಯ ತೋರುವ ಬಾ(೨)
                             (ಗೆಳೆಯಾ...)

ಭಾರತ ನಮಗದು ತಾಯಿಯ ನಾಡು
ಪರಿಮಳ ಕಸ್ತೂರಿಯ ಗಂಧದ ಬೀಡು
ಗಾಂದಿ ನೆಹರುಗಳು ಸಾರಿದ ನಾಡು
ಕನ್ಯಕುಮಾರಿಯಿಂದ ಕಾಶ್ಮೀರ ನೋಡು(೨)
ಕಮನವು ಸಂಕಲನಕೆ ಸುಮವೂ
ಜಗದಲ್ಲಿಯೆ ಅಂದದ ಸುಮವೂ
ಹಲವಿಧ ಭಾಷೆಯ ತವರೂರು
ಅವುನಮ್ಮ ತೀರದ ಚೆಲುವುಗಳು
ಶಾಂತಿಯ ಗೋಪುರವು(೨)
                            (ಗೆಳೆಯಾ...)

                                   -ನಲ್ಮಿಡಿ ಚಾರ್ಮಾಡಿ

Photo Credit: kannadadindima.wordpress.com

Author image
About the Author
ಹೆಸರು : ಮಹಮ್ಮದ್ ನೌಶಾದ್
▪ಕಾವ್ಯನಾಮ: ನಲ್ಮಿಡಿ
ಊರು: ಚಾರ್ಮಾಡಿ

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.