ನನ್ನವರಿಗೆ
ತಿಂಡಿ ತಿನ್ನುವಾಗ
ಊಟ ಮಾಡುವಾಗಲೂ
ಅದರೊಂದಿಗೇ ಮಾತು
ಮಾತು...
ಮಾತು...
ಹೇಳುವೆ ಆಗ, ನಾನೂ ಮೊಬೈಲು ಆಗಬೇಕಿತ್ತು!
ನಿಮ್ಮ ಕಿಸೆಯೊಳಗೆ,
ಕೈಯೊಳಗೆ
ಮತ್ತು ಕಿವಿಯ ಬಳಿ
ಇರಬಹುದಿತ್ತು
ಯಾವತ್ತೂ!!
-ಶ್ರೀಮತಿ ಮಲ್ಲಿಕಾ ಜೆ. ರೈ
Photo Credit: clipart-library.com
About the Author
ಹೆಸರು : ಶ್ರೀಮತಿ ಮಲ್ಲಿಕಾ ಜೆ. ರೈ
▪ಶ್ರೀಮತಿ ಮಲ್ಲಿಕಾ ಜೆ. ರೈ ಇವರು ಪತ್ತೂರಿನ ಗುಂಡ್ಯಡ್ಕ ನಿವಾಸಿಯಾಗಿದ್ದು ಎಂ.ಕಾಮ್ ಪದವೀಧರೆಯಾಗಿದ್ದಾರೆ. ಕವಯಿತ್ರಿ, ಹವ್ಯಾಸಿ ಲೇಖಕಿಯಾಗಿರುವ ಇವರು ಪುತ್ತೂರು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಹಾಗೂ ಸಿರಿಗ್ನಡ (ಮಹಿಳಾ)ವೇದಿಕೆಯ ಅಧ್ಯಕ್ಷರಾಗಿರುತ್ತಾರೆ. ಜೂನಿಯರ್ ಚೇಂಬರ್ ಆಫ್ ಇಂಟರ್ನ್ಯಾಶನಲ್ ಸೆನೆಟರ್(ಜೆ.ಸಿ.ಐ), ಪುತ್ತೂರು ಜೆ.ಸಿ.ಐ ಹಾಗೂ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸದಸ್ಯರಾಗಿರುವ ಇವರು ಹಲವಾರು ಲೇಖನಗಳು, ಚುಟುಕುಗಳು ಹಾಗೂ ಕವಿತೆಗಳನ್ನು ಬರೆದಿರುತ್ತಾರೆ.
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.