ಪ್ರೇಮಗೀತೆ ೩
ನಿನ್ನ ನೋಡಿದಂದೇ ನಾನು
ಅಂದುಕೊಂಡೆ...
ನೀನೇ ಗೆಲ್ಲುವೆಯೆಂದು
ಗೆಲುವಿನೊಳಗೆ ನಾ ಸೋಲುವೆ
ಸೋತ ಮೇಲೆ ನಾ
ನಿನ್ನ ಗೆಲ್ಲಬಹುದೇ?
ಕಣ್ಣು ಮಾತಾಡದೆ
ರೆಪ್ಪೆ ತೆರದೇ ಇತ್ತು...
ಕಿವಿಯು ಕಿವುಡಾಗಿ
ಕಣ್ಣಿಗೇ ಕೆಲಸ ಕೊಟ್ಟಿತ್ತು
ಬಾಯಿಯೂ ಮೌನತಳೆದು
ಮಾತಾಡದೇ ಇದ್ದಾಗ
ಅಂದುಕೊಂಡೆ
ನೀನೇ ಗೆಲ್ಲುವೆಯೆಂದು...
ಅಕ್ಷರ ಪೋಣಿಸುತ್ತಿದ್ದೆ
ನೀ ಸಿಗುವ ಮೊದಲು...
ಕವಿಯಾದೆ ಪದಗಳನು
ಜೋಡಿಸುತ್ತಾ...
ಸವಿಯಾದ ನಗುವಿನಲ್ಲಿ
ಸಾಲುಗಳ ಮೇಲೆ
ನೀ ಬಂದು ಕುಳಿತಾಗ
ಅಂದುಕೊಂಡೆ
ನೀನೇ ಗೆಲ್ಲುವೆಯೆಂದು...
ಎಷ್ಟು ದಿನ ನೀನೇ ಗೆಲ್ಲುವೇ?
ನನ್ನನ್ನೂ ಒಂದು ಬಾರಿ ಗೆಲ್ಲಿಸು
ಆ ಗೆಲುವಿನೊಳಗೆ ನಿನಗೆ
ಸೋಲಿಲ್ಲದ ಸೆತುವೆಯನ್ನು
ಕಟ್ಟಿಕೊಡುವೆ...
ಪ್ರೀತಿಯ ಕಲ್ಲುಗಳಿಂದ
ಅದು ನಿನ್ನ ಗೆಲುವು...
ನನ್ನೊಳಗಿನ ನಿನ್ನ ಗೆಲುವು!
ನನಗೂ ಗೆಲ್ಲಬೇಕೆಂಬ
ಬಯಕೆ
ಪ್ರೀತಿಯ ಸಾಗರವನ್ನು
ಪ್ರೀತಿಯಿಂದ
ಹೇಳು ಗೆಲ್ಲಬಹುದೇ?
ಗೆಲ್ಲಬಹುದೇ ಒಂದು ಬಾರಿ?
ಅದು ನಿನ್ನದೂ ಗೆಲುವು
ಶಾಶ್ವತ ನಿನ್ನದು, ನನ್ನದೂ.
ಕನಸುಗಳನ್ನು ಹೊಸೆದು
ನನಸು ಮಾಡುವ ಬಯಕೆ
ಗೆಳತಿ... ಹೇಳು
ಏನೆಂದುಕೊಳ್ಳಲಿ?
ಸೋಲಲೇ ಮತ್ತೊಮ್ಮೆ?
ಶಾಶ್ವತವಾಗಿ!
-ಶ್ರೀಸುತ
Photo Credit: whoa.in
ಪ್ರೇಮಗೀತೆ ೨ - "ಕಣ್ಣು ಮಾತಾಡಿದೆ" ಹಾಡನ್ನು ಓದಲು ಪ್ರೇಮಗೀತೆ ೨ ನ್ನು ಕ್ಲಿಕ್ ಮಾಡಿ.
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.