ಭಾವಗೀತೆ ೫ - ಯಾವ ಜನ್ಮದ ಮೈತ್ರಿ (2012)
ರಾಗ - ಮಧುವಂತಿ
ರಚನೆ - ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
ಯಾವ ಜನ್ಮದ ಮೈತ್ರಿ ನಿನ್ನದು
ನನ್ನ ಪ್ರೇಮದ ಕಡಲಲಿ
ಕಾಣುತಿಹುದು ನಿನ್ನ ನೆನಪು
ನನ್ನ ಕನಸಿನ ಪುಟದಲಿ
ಹಸಿರೆಲೆಗಳ ಮೇಲೆ ಜಾರುವ
ಬಾಷ್ಪಹನಿಯು ನಿನ್ನದು
ನಿನ್ನ ಕಾಣದೆ ಕಣ್ಣಿನಂಚಲಿ
ಹರಿವ ಸೋನೆಯು ನನ್ನದು
ಸಾಗರೋತ್ತರದಲ್ಲಿ ತೀರವು
ನಿನ್ನ ದೃಶ್ಯವ ಕಲೆತಿದೆ
ಭೋರ್ಗರೆವ ಅಲೆಯ ಸದ್ದು
ನಿನ್ನ ಧ್ವನಿಯನು ಸಾರಿದೆ
ಕೈಗೆ ಸಿಗದ ಉಸಿರಿನಂತೆ
ನೀನು ಬಂದು ಹೋಗುವೆ
ಯಾವ ಜನ್ಮದ ಮೈತ್ರಿ ನೀನು
ಎಂದು ನೀನೆನಗೊದಗುವೆ..?
ನನ್ನ ಪ್ರೇಮದ ಕಡಲಲಿ
ಕಾಣುತಿಹುದು ನಿನ್ನ ನೆನಪು
ನನ್ನ ಕನಸಿನ ಪುಟದಲಿ
ಹಸಿರೆಲೆಗಳ ಮೇಲೆ ಜಾರುವ
ಬಾಷ್ಪಹನಿಯು ನಿನ್ನದು
ನಿನ್ನ ಕಾಣದೆ ಕಣ್ಣಿನಂಚಲಿ
ಹರಿವ ಸೋನೆಯು ನನ್ನದು
ಸಾಗರೋತ್ತರದಲ್ಲಿ ತೀರವು
ನಿನ್ನ ದೃಶ್ಯವ ಕಲೆತಿದೆ
ಭೋರ್ಗರೆವ ಅಲೆಯ ಸದ್ದು
ನಿನ್ನ ಧ್ವನಿಯನು ಸಾರಿದೆ
ಕೈಗೆ ಸಿಗದ ಉಸಿರಿನಂತೆ
ನೀನು ಬಂದು ಹೋಗುವೆ
ಯಾವ ಜನ್ಮದ ಮೈತ್ರಿ ನೀನು
ಎಂದು ನೀನೆನಗೊದಗುವೆ..?
-ಶ್ರೀಸುತ
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.