ತ್ರಿಪದಿ ೧ - ಸಿರಿ


ಕನ್ನಡ ತ್ರಿಪದಿ ೧ - ಸಿರಿ (2012)
ಜಾನಪದ ಶೈಲಿ ಹಾಡು
ರಚನೆ - ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

ಬಣ್ಣಬಣ್ಣದ ಬದುಕು ಹೆಜ್ಜೆಹಾಕುತ ಬಂದು
ಚಿತ್ತಾರ ಹಾಕ್ಯಾವೋ ನನಮ್ಯಾಲೆ | ನೋಡವ್ವ
ನಾನಾದೆ ಮುತ್ತಿನ ಸರಮಾಲೆ ||

ಹಣೆಗೆ ತಿಲಕವನಿಟ್ಟು ಕೈಗೆ ಕಡಗವ ತೊಟ್ಟು
ಹೊಳೆಯುತ್ತಲಿರುವೆ ಶಶಿಯಾಂಗ್ಹ | ನನನೋಡಿ
ಹಾಕುವರು ಪದವ ಬೆಸೆದ್ಹಾಂಗ್ಹ ||

ಬಣ್ಣಾದಾಟಿಕೆ ಜೋಡಿ ಸಣ್ಣ ಹೆಜ್ಜೆಯನಿಟ್ಟು
ಎಡವುತ್ತಲಿರುವೆ ನಡೆದಂತೆ | ನನ್ನನ್ನು
ಎತ್ತಿಕೊಳ್ಳುವರು ಹೂವಂತೆ ||

ಮೂಡಣದಿ ರವಿಮೂಡಿ ಇಳೆಯು ಬೆಳಕಾದಂತೆ
ನಾ ಬೆಳೆದು ಮನೆಗೆ ಬೆಳಕಾಪೆ | ನಾನಿಂದು
ಹೆತ್ತ ನನ್ನಬ್ಬೆಗೆ ಒಲವಾಪೆ ||

ಅವ್ವಂಗೆ ಮಗುವಾಗಿ ದೇಶಕ್ಕೆ ಬಲವಾಗಿ
ಕೀರುತಿಯ ತರುವೆ ಸಿರಿಯಾಗಿ | ನಾ ಹೊಳೆವೆ
ಹೆತ್ತವರ ಮಡಿಲಿಗೆ ಬೆಳಕಾಗಿ ||

-ಶ್ರೀಸುತ

Photo Credit: Sobagu

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.