ಭಾವಗೀತೆ ೪ - ಖಾಲಿ ಜೋಕಾಲಿ
ಜೋಕಾಲಿ ಖಾಲಿಯಾಗಿದೆಯಿಂದು
ರಾಧೆಯ ನಗುವಿನ ಒಲವು ಇಲ್ಲದೆ
ಕೃಷ್ಣನ ಕೊಳಲ ಕಂಪು ಕುಗ್ಗಿದೆಯಿಂದು
ಅವಳ ತಂಪು ತಾಪದ ಸಿಹಿ ಇಲ್ಲದೆ
ಮುರಳಿಗೆ ಜೊತೆಯಲಿ ಹಲವರು
ರಾಧೆಗೊಬ್ಬನೇ ಮೋಹನ
ಆಕೆಗೆ ಬಯಕೆಯು ಹಲವಾರು
ಎಲ್ಲಿಯ ತನಕ ಯೌವ್ವನ
ಮನಸಿನ ಪುಟದೊಳಗೂಂದು
ಕಾವ್ಯವ ಬರೆದಳು ನೀಡಲು
ನಿದಿರೆಯ ಕನಸೊಳು ಮಿಂದು
ಮಡಿಗೊಂಡಳು ಶ್ಯಾಮನ ಕಾಣಲು
ಪ್ರೀತಿಯ ಚಿಲುಮೆಗೆ ನಾಚಿತು
ವೃಂದಾವನದ ಕುಸುಮಗಳು
ಅವಳ ಹೆಜ್ಜೆಗೆ ಮೊಳಗಿತು
ಪ್ರೇಮದ ಹೂವಲಿ ದುಂಬಿಗಳು
ಎಲ್ಲರಿಗೂ ಬಯಸಿದಂತೆಯೇ ದೊರೆತ
ತನ್ನವರ ಪ್ರೀತಿಗೆ ಬಾಗುತ್ತಾ
ರಾಧೆಗೂ ಪ್ರೀತಿಯ ಕಡಲಿನ ಮೊರೆತ
ಕೃಷ್ಣನ ದಿನವೂ ಕಾಣುತ್ತಾ
ಕೃಷ್ಣಾ ಕೃಷ್ಣಾ ಎನ್ನುವ ಮಂತ್ರವ
ಅನುದಿನ ಜಪಿಸುತಲಿಹಳು
ಕಾಯುತಿಹಳು ರಾಧೆ
ಮರೆಯುತಿಹಳು ಬಾಧೆ
ಇನಿಯನ ನೆನೆಯುತಲಿಹಳು
ಜೋಕಾಲಿಯ ತೂಗುತಲಿಹಳು...
-ಶ್ರೀಸುತ
Nice
ReplyDeleteThank you Navya...
ReplyDelete