ಕಾಡಿತೇ ವಿರಹದ ನೋವು?


ಕಡಲಿನ ತೀರದಿ ನಿಂತಿಹ ನೀರೆಯೇ
ದಿಟ್ಟಿಸಿ ನೋಡುವೆ ಏನನ್ನು?
ಸಾಗರದಂಚಲಿ ನಿಂತಿಹ ಮೋಡದಿ
ಕಂಡೆಯೆ ನಿನ್ನೊಡನಿಹ ಪ್ರಿಯತಮನನ್ನು?

ಪ್ರಣಯದ ನೆನಪಿನ ಅಲೆಗಳು ಇಂದು
ಹಾಡಿತೆ ಮನದಿ ಪ್ರೀತಿಯ ರಾಗ?
ಮುಸ್ಸಂಜೆಯ ಕೆಂಪಿನ ಬಾನಿನ ಚೆಲುವು
ತಂದಿತೇ ಹೃದಯಕೆ ವಿರಹದ ನೋವ?

ಬೀಸುವ ತಣ್ಣನೆ ಗಾಳಿಯ ತಂಪಲಿ
ಹಕ್ಕಿಯ ಉಲಿತದ ನಾದದ ಇಂಪಲಿ
ಅಲೆಗಳ ತಕಧಿಮಿ ನಾಟ್ಯದ ಸೆಳೆವಲಿ
ಬಯಸಿತೆ ಮನವು ಇನಿಯನ ಸನಿಹ?

ಮಳೆಯಲಿ ಜತೆಯಲಿ ಆಡಿದ ನೆನಪಲಿ
ಮನವ ತಣಿಸುತಲಿರುವಿಯೇನು?
ಕೇಳುತಲವನ ಸವಿಮಾತನ್ನ
ಜೀವನ ನೌಕೆಯ ಸಾಗಿಸುವ ಬಯಕೆಯೇನು?

- ಶ್ರೀಮತಿ ಅನ್ನಪೂರ್ಣ

ಚಿತ್ರಕಲೆ: ಶ್ರೀ ಸತ್ಯರಾಜ್ ಕುಮಾರಮಂಗಲ

Author image
About the Author
ಹೆಸರು: ಶ್ರೀಮತಿ ಅನ್ನಪೂರ್ಣ.
ಕಿದೂರು ಸಮೀಪದ ಬೆಜಪ್ಪೆ ನಿವಾಸಿಯಾದ ಶ್ರೀಮತಿ ಅನ್ನಪೂರ್ಣ ಇವರು ಸಾಹಿತ್ಯ ಪ್ರಿಯರಾಗಿದ್ದು ಬರವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹವ್ಯಾಸಿ ಬರಹಗಾರರಾಗಿ ಅನೇಕ ಕವಿತೆಗಳನ್ನು ಬರೆದಿದ್ದು ಅವರ ಬರಹಗಳನ್ನು ನಮ್ಮ ಜಾಲದಲ್ಲಿ ಓದಬಹುದು.

Please share and support me

5 comments:

 1. 'virahada novu' chennaagi barediddiri. Aa novu nijavaagiyu mareyalaagada nenapannu koduthade.
  Shubhavagali...!

  ReplyDelete
 2. Thumba chennagithe pranayatha nenapina alekalu...

  ReplyDelete
 3. ಕವಿತೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು

  ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.