೧. ಆಟದೊಳಗೆ
ಕತ್ತಲೆಯ ಆಟದಲ್ಲಿ ಗೆದ್ದೋರು ಯಾರು
ಸೊತೋರು ಯಾರು?
ಗೆಲುವು ಸೋಲಿನಲ್ಲಿ ಉಳಿದೋರು ಯಾರು ಅಳಿದೋರು ಯಾರು?
ಕತ್ತಲೆಯು ಬೆಳಕಿನ ಸೋಲನ್ನು ಕಂಡು
ಮರುಕದಿಂದ ಕೈಹಿಡಿಯಿತೋ? ಅಥವಾ
ಬೆಳಕಿನ ಕಿರಣಕ್ಕೆ ಕತ್ತಲೆಯ ಬಣ್ಣ
ಮಾಸಿಹೋಗಿ ಆಟ ಮುಗಿಯಿತೋ?
ಯಾರು ಬಲ್ಲರು...
೨. ಪರಿತಾಪ
ಎನ್ನ ಮನದ ಮಾತ ನಾನೇ ಕೇಳಲಾರೆ
ಕಂಬನಿಯ ಹೊಳೆಯಲ್ಲಿ ಈಜಲಾರೆ...
ನನ್ನ ಕಂಬನಿಯ ಕಥೆಯನ್ನು ಹೇಳುವಾಸೆ
ಆದರೆ, ಅದನ್ನು ಹೇಳದೇ ತಿಳಿಯುವವ
ಎಂದು ಸಿಗುವನೋ ನಾ ಕಾಣೆ!!!
೩. ಗಮ್ಯ
ನೀನಂದೆ ಅಂದು
ನಾನು ಬಾಣವಾದರೆ ನೀನು ಬಿಲ್ಲಿನಂತೆಂದು
ಆದರೆ ಗಮ್ಯವನು ಸೇರಲು
ಬಾಣ ಬಿಲ್ಲನ್ನು ಬಿಡಲೇಬಕೆಂಬುದು
ಅರಗಿಸಲಾಗದ ಕಹಿ ಸತ್ಯ.
೪. ಕನಸು ಜೀವನದೊಳಗೆ
ಕನಸೇ ಜೀವನವೋ ಜೀವನವೇ ಕನಸೋ
ನನಗೊಂದೂ ತಿಳಿಯದು.
ತಿಳಿಯುವಾಸೆ...
ಆದರೆ ಅದೊಂದು ತಿಳಿಯಲಾಗದ ಮರ್ಮ!!!
ಜೀವನದಲ್ಲಿ ನಡೆವವು ಮರೆಯಲಾಗದ ಸನ್ನಿವೇಶಗಳು
ಆದರೆ ಮರೆಯಲೆ ಬೇಕು.. ಅದೇ ಜೀವನದ ನೀತಿ.
೫. ಹರೆಯ
ಆಸೆಗಳು ನೂರು ಕಣ್ಣ ತುಂಬ
ಮನಸೊಂದು ಹೇಳುವುದು ತುಂಬೆನ್ನ ತುಂಬ
ಆ ಆಸೆಯನ್ನ...
ವಯಸ್ಸಿನ ಆಟವದು, ಮನಸಿನ ಕಾಟ,
ಸಿಲುಕಿದಷ್ಟು ಆಳಕ್ಕೆ ಹೋಗುವೆ ಕೇಳೆನ್ನ ಜಾಣೆ.
-ಅಮೃತ ಆರ್
Photo Credit: Stunning
ಬಹಳ ಚೆನ್ನಾಗಿದೆ.
ReplyDeleteಧನ್ಯವಾದಗಳು
ReplyDelete