ಜೀವವೀಣೆ


ಭಾವಗೀತೆ ೩ - ಜೀವವೀಣೆ

ಎನ್ನ ಜೀವದ ವೀಣೆ ನಿನ್ನ ಒಲವಿಗೆ ಮಿಡಿದು
ಕಾಣುತಿಹುದು ನಿನ್ನ ಕನಸು
ಮನಸಿನ ಭಾವದಲಿ ನಿನ್ನ ಕಾಣುವ ಪರಿಯು
ಮನಸಲೇ ಮೂಡಿಹುದು ನಿನ್ನ ಕನಸು

ನಿನ್ನ ಚೆಲುವಿನ ಪರಿಗೆ ನನ್ನ ನಾ ಮರೆತಿರುವೆ
ಹೃದಯದಲಿ ನಿನ್ನೊಲವು ಮಿಡಿಯುತಿಹುದು
ಯಾವ ವೃಂದಾವನದ ಕುಸುಮ ಕನ್ನಿಕೆ ನೀನು
ಹೂವಂತೆ ಅರಳುತಿದೆ ನಿನ್ನ ಕನಸು

ನೀ ಮುರಿದ ಒಲವಿನಲಿ ನನ್ನ ಚೇತನ ಕುಸಿದು
ಹೂವು ಬಾಡಿತು ನೋಡು ನಿನ್ನ ನುಡಿಗೆ
ನನ್ನ ಆಸೆಗಳೆಲ್ಲಾ ಚಿತ್ತ ಕಲ್ಪನೆಯಂತೆ
ನೋವನ್ನೆ ಕಾಣುತಿದೆ ನನ್ನ ಕನಸು

                                             -ಶ್ರೀಸುತ

Photo Credit: Sulekha

ಪದ್ಯರಚನೆ: 2013

ಭಾವಗೀತೆ ೨ - "ಪ್ರೇಮಾಶ್ರಯ" ವನ್ನು ಓದಲು ಭಾವಗೀತೆ ೨ ನ್ನು ಕ್ಲಿಕ್ ಮಾಡಿ

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.