ಚಿತ್ರಕವನ ೩:
ಅಮ್ಮ ಅಪ್ಪ ಕೆಲಸಕ್ಕೋದರೆ
ಅಜ್ಜನೇ ನಮ್ಮಯ
ಪುಟ್ಟನ ಗೆಳೆಯನು
ಅಜ್ಜನ ಮಡಿಲಲಿ ಕುಳಿತು
ಕತೆಯನು ಕೇಳುವ ಪುಟ್ಟ
ಅಜ್ಜನ ಜತೆಯಲ್ಲಿ ಆಟವ
ಆಡುತ ಸಮಯವು
ಸರಿದುದು ತಿಳಿಯುವುದೇ
ಇಲ್ಲ ನಮ್ಮಯ ಪುಟ್ಟನಿಗೆ
ಅಜ್ಜನು ಹೇಳುವ
ಕತೆಯನು ಕೇಳುತ
ಅದರಲಿ ತೇಲುದು
ಪುಟ್ಟನ ಮನಸು
ಪುಟ್ಟನ ಬಾಲ್ಯವು
ಅಜ್ಜನ ಮಡಿಲಲಿ
ಕಳೆವುದು ಹಾಯಾಗಿ
ಅಜ್ಜ ಅಜ್ಜಿಯರಿದ್ದರೆ
ಮನೆಯಲಿ ಮಕ್ಕಳ
ಬಾಲ್ಯವು ಸುಂದರ-
ವಾಗಿಯೇ ಕಳೆವುದು
ಮಕ್ಕಳ ನೋಡಲು ಹಿರಿಯರು
ಇದ್ದರೆ ಚಿಂತೆಯು ಇಲ್ಲ
ಹೆತ್ತವರಿಗೆ
ಮಕ್ಕಳ ಹೊರಗಡೆ ಬಿಡುವ
ಕಷ್ಟವು ತಪ್ಪುವುದು
ಮಕ್ಕಳು ತಪ್ಪು ದಾರಿಯ
ತುಳಿಯದೆ ಉತ್ತಮರಾಗುವರು
ಹಿರಿಯರ ವೃದ್ಧಾಶ್ರಮ-
ದಲಿ ಬಿಡದೆ ಮಕ್ಕಳ
ಜತೆಯಲ್ಲಿ ಕಳೆಯಲು
ಬಿಟ್ಟರೆ ವೃದ್ಧರು ಸಂತಸದಿಂದ
ಮಕ್ಕಳ ಹರಸುವರು.
-ಪಂಕಜಾ ರಾಮಭಟ್
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.