ಗೆಳತಿ



ನಿನ್ನಾ ನಾ ನೋಡಿದ ಮೇಲೆ
ಬರೆಯ ಹೊರಟೆ ಕವಿತೆ ಸಾಲು
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು 
ನಾನಾಗಿ ಹೋದೆ ಅರಳು ಮರಳು
ಓ ಗೆಳತಿ .. ನೀ ನನ್ನ ಪ್ರೀತಿ ಕಣೇ...

ನಿನ್ನ ಪ್ರೀತಿಗಾಗಿ ಹಪಹಪಿಸುವ ದುಂಬಿ ನಾನು
ನಿನ್ನ ಪ್ರೀತಿ ವಾತ್ಸಲ್ಯಕ್ಕೆ ಅಳತೆ ಏನು
ಪಯಣಿಸಲೇ ನಾ ನಿನ್ನ ಪ್ರೀತಿ ನೌಕೆಯಲಿ
ಬೀಸು ನೀ ಪ್ರೇಮ ಪಾಶವ ನನ್ನದೆಯ ಗೂಡಲ್ಲಿ
ಓ ಗೆಳತಿ .. ನೀ ನನ್ನ ಪ್ರೀತಿ ಕಣೇ...

ನೀ ಬರುವ ದಾರಿಯಲಿ ನಾ ಕಾದು ಕುಳಿತೆ
ನೀ ತೋರುವ ಕಿರುನಗೆಗೆ ನಾನಾಗಿ ಸೋತೆ
ನಿನ್ನ ಸಹವಾಸಕೆ ಈ ಜೀವ ಬೇಡಿದೆ
ನಾ ಕಂಡ ಕನಸು ನಿಜವಾಗಬಾರದೇ
ಓ ಗೆಳತಿ .. ನೀ ನನ್ನ ಪ್ರೀತಿ ಕಣೇ...

                                 -ನಾಗರಾಜ ಭಟ್ ಟಿ ಆರ್

Photo Credit: Whoa.in

Author image
About the Author
ಹೆಸರು:ಶ್ರೀ ನಾಗರಾಜ ಭಟ್ ಟಿ ಆರ್.
▪ಶ್ರೀ ನಾಗರಾಜ ಭಟ್ಟರು ಜನಿಸಿದ್ದು ಶೃಂಗೇರಿಯಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಸಮೀಪದ ಹಳುವಳ್ಳಿಯವರಾದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ತಮ್ಮ ತಾಯಿನೆಲೆಯಲ್ಲಿಯೇ ಪೂರೈಸಿದರು. ಆನಂತರ ಪದವಿ ಪೂರ್ವ ವ್ಯಾಸಾಂಗಕ್ಕಾಗಿ ದೂರದ ಮೈಸೂರನ್ನು ಪ್ರವೇಶಿಸಿದ ಇವರು ಅಲ್ಲಿಯ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದೊಂದಿಗೆ ಪಿ.ಯು ಹಂತವನ್ನು ಮುಗಿಸಿದರು. ತದನಂತರ ಮೈಸೂರಿನ ಯುವರಾಜ ಕಾಲೇಜಿನಲ್ಲಿ BCA ಪದವಿ ವ್ಯಾಸಾಂಗವನ್ನು ಮುಗಿಸಿದರು. ಇವರು ಓರ್ವ ಬಹುಮುಖ ಪ್ರತಿಭೆ. ಕ್ರೀಡೆ, ಸಾಹಿತ್ಯ,ನಾಟಕ, ಯಕ್ಷಗಾನ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದು ಇದುವರೆಗೆ ಹಲವಾರು ಕಥೆ, ಕವನ, ಲೇಖನಗಳನ್ನು ಬರೆದಿದ್ದಾರೆ. ಇವರ ಬರಹಗಳು ಹೊಸದಿಗಂತ, ವಿಶ್ವವಾಣಿ, ರೀಡೂ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ತನ್ನದೇ ಒಂದು ಅಂತರ್ಜಾಲ ತಾಣವನ್ನೂ ಹೊಂದಿದ್ದಾರೆ. ನಾಟಕದಲ್ಲಿ ಅತ್ಯಂತ ಹೆಚ್ಚಿನ ಆಸಕ್ತಿಯನ್ನು ಹೊಂದಿದ ನಾಗರಾಜರು ಇದುವರೆಗೆ ೧ ಕನ್ನಡ ನಾಟಕವನ್ನು ಬರೆದಿದ್ದು, ೩ ನಾಟಕಗಳನ್ನು ನಿರ್ದೇಶಿಸಿದ್ದಲ್ಲದೆ ೧೦ಕ್ಕೂ ಮಿಗಿಲಾಗಿ ನಾಟಕಗಳಲ್ಲಿ ಭಾಗವಸಿದ ಕೀರ್ತಿ ಇವರದು. ಕಾಲೇಜು ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಇವರದು ರಸಪ್ರಶ್ನೆಯಲ್ಲೂ ಎತ್ತಿದ ಕೈ. ಮೈಸೂರಿನ "ನಿರಂತರ" ಎಂಬ ಕಲಾತಂಡದ ಸದಸ್ಯನಾಗಿದ್ದುಕೊಂಡು ಮೈಸೂರಿನ ಹಲವು ನಾಟಕಗಳಲ್ಲಿ ಭಾಗವಹಿಸಿ ಅನುಭವ ಹೊಂದಿದ್ದು ತನ್ನದೇ ಊರಿನಲ್ಲಿ "ಸಂಚಲನ" ಎಂಬ ಗೆಳೆಯರ ತಂಡವೊಂದನ್ನು ಸ್ಥಾಪಿಸಿ ಹಲವಾರು ನಾಟಕಗಳನ್ನು ನಡೆಸಿದ್ದಾರೆ. ಸಂಗೀತದಲ್ಲೂ ಮನಹಾಸಿರುವ ಇವರು ಪ್ರಸ್ತುತ ವಿದ್ವಾನ್ ಎ ವಿ ದತ್ತಾತ್ರೇಯ ಭಟ್ ಇವರ ಬಳಿ ಶಾಸ್ತ್ರೀಯ ಕೀಬೋರ್ಡ್ ವಾದನವನ್ನು ಅಭ್ಯಸಿಸುತ್ತಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶಿಕ್ಷಣವನ್ನು ಪೂರೈಸಿರುವ ನಾಗರಾಜರು ಮೈಸೂರಿನ ಇನ್ಫೋಸಿಸ್ ಕಂಪೆನಿಯಲ್ಲಿ ತನ್ನ ವೃತ್ತಿಬದುಕನ್ನು ನಡೆಸುತ್ತಿದ್ದಾರೆ. ಇವರ ಬರಹಗಳನ್ನು ನಮ್ಮ ಜಾಲತಾಣದಲ್ಲಿ ಓದಬಹುದು.
ದೂರವಾಣಿ: 9535496746
ಅಂತರ್ಜಾಲ ತಾಣ: ಮಾತೃಭೂಮಿಗೆ ನಮನ

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.