ಮಾಯಾಮೃಗ


ದೂರದೂರದ ದಿಕ್ಕಿನಲ್ಲಿ ಥಳಪಳಿಸಿ ಕಂಡಿತಾಗ
ನೋಡು ಮನವೆ ಕಣ್ಣೋಟ ಹರಿಸಿ ಆ ದಿಟ್ಟತನದ ವೇಗ
ನುಸುಳುತಿಹುದು ಅದು ಸತ್ಯದ ಸುಳಿಗೆ ಮಿಂಚಿನೋಟದಿಂದ
ಮಾಯಾಮೃಗ ಮಾಯಾಮೃಗ ಮಾಯಾಮೃಗವಂತೆ
ಅದು ಮಾಯಾಮೃಗವಂತೆ

ಕಣ್ಣೆರಡು ಹೊಳೆದು ಹೊಳೆದರಿವ ತೊಳೆದು ನೀಡುವುದು ಸತ್ಯದರಿವ
ಸಾಗಿ ಆ ಕಡೆಗೆ ತಿರುಗಿ ನೋಡಿದರೆ ಕಾಣದು ಸತ್ಯನಿಲುವ
ಸೆಳೆಯುತ್ತಿದೆ ಎಳೆಯುತ್ತಿದೆ ಅಜ್ಞಾನದಿಂದ ಹೊರಗೆ
ಮಾಯಾಮೃಗ ಮಾಯಾಮೃಗ ಮಾಯಾಮೃಗವಂತೆ
ಅದು ಮಾಯಾಮೃಗವಂತೆ

ಹಾರಿ ಬೇಲಿಯನು ಜಿಗಿದು ಕಂದಕದ ಮೋಸವನ್ನು ಬಡಿದು
ದ್ವೇಶ-ಮತ್ಸರಾಕ್ರೋಷಾಸೂಯೆಗಳ ತನ್ನೊಳಗೆ ಕರೆದು ಇರಿದು
ಓಡುತ್ತಿದೆ ಮರೆಯಾಗಿ ಕಾಣಿಸದ ಸತ್ಯಸುಧೆಗೆ
ಮಾಯಾಮೃಗ ಮಾಯಾಮೃಗ ಮಾಯಾಮೃಗವಂತೆ
ಅದು ಮಾಯಾಮೃಗವಂತೆ

ಬಳಿಗೆ ಬಾ... ಮಾಯಾಮೃಗವೇ ಗೆಲುವಿನ ಹಾದಿಯಲಿ
ಕರೆದು ತಾ... ಭರವಸೆ ದನಿಯ ಸತ್ಯದ ನಿಲುವಿನಲಿ
ಮತ್ತೊಮ್ಮೆ ನಡೆಸು ಶೋಧ ಭೇಧಿಸಲು ಚಕ್ರವ್ಯೂಹ
ಮಾಯಾಮೃಗವೇ ಮುನ್ನುಗ್ಗಿ ಹೋಗು ವ್ಯೂಹದ ನೆರಳಲ್ಲಿ
ಮಾಯೆಯ ಸುಳಿಯಲ್ಲಿ...

                                                                                     -ಶ್ರೀಸುತ
Photo Credit: Krahnpix


ದಿನಾಂಕ 02-08-2014 ಹಾಗೂ 03-08-2014ರ ವರೆಗೆ ಎರಡು ದಿನಗಳ ಕಾಲ ಪೊಳಲಿಯಲ್ಲಿ ನಡೆದ "19ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ"ದ ಕವಿಗೋಷ್ಟಿಯಲ್ಲಿ ನಾನು ವಾಚಿಸಿದ ಕವಿತೆ "ಮಾಯಾಮೃಗ". ಈ ಕವಿತೆ ಸಮ್ಮೇಳನದ ಸ್ಮರಣ ಸಂಚಿಕೆಯಾದ 'ಪೊಳಲಿಯ ಫಲ್ಗುಣಿ' ಯಲ್ಲಿ ಪ್ರಕಟವಾಗಿದ್ದು, ನಿಮ್ಮ ಮುಂದೆ ಈ ಜಾಲತಾಣದಲ್ಲಿ ಬಿತ್ತರಿಸುತ್ತಿದ್ದೇನೆ. ಧನ್ಯವಾದಗಳು.
ಸಮ್ಮೇಳನಾಧ್ಯಕ್ಷರು: ನಾಡೋಜ ಪ್ರೊ. ಕೆ.ಪಿ. ರಾವ್
ಕವಿಗೋಷ್ಠಿ ಅಧ್ಯಕ್ಷರು: ಡಾ. ಜಿ. ಎನ್. ಪಟವರ್ಧನ್


Photo Credit: Daijiworld



Please share and support me

4 comments:

  1. ಉತ್ತಮ ಕವಿತೆ... 😊

    ReplyDelete
    Replies
    1. ಧನ್ಯವಾದಗಳು ನಾಗರಾಜ ಭಟ್ರೆ...

      Delete
  2. ಚೆನ್ನಾಗಿದೆ ದಿವಾಣರೆ.

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.