ಪ್ರೇಮಗೀತೆ ೧ - ಭಾವತುಂಬಿ ನನ್ನ ಮೊಗವು
ಭಾವತುಂಬಿ ನನ್ನ ಮೊಗವು
ಅರಳುತಿದೆ ನೀ ನೋಡೀಗ
ನಿನ್ನ ನೋಡಿ ಜಾಜಿ ಹೂವು
ಹೊರಳುತಿದೆ ನಿನ್ನಡೆಗೀಗ
ಕಾಣಲು ನಿನ್ನನು ಏನೊ ಸಂತಸ
ನಿನ್ನಯ ನಡಿಗೆಗೆ ಹೃದಯವೇ ಉಲ್ಲಸ
ನಾನೆಂದು ನಿನ್ನ ಪ್ರೀತಿ ತೋಟದಲ್ಲಿ
ನಲಿವ ಚಂದ್ರಮ...
ನಿನ್ನಯ ಸ್ಪರ್ಶವಾಗಲು
ಕರಗಿದೆ ತನುಮನ
ಮನಸಲಿ ನೀನೆ ತುಂಬಲು
ಚಿಗರುರಿದೆ ಯೌವ್ವನ
ನೀನಿದ್ದರೆ ಬಾಳೇ ಸುಂದರ
ನೀನು ಅಂದರೆ ನನಗೀಗ ಅತಿಮಧುರ
ನೀನೆಂದು ನನ್ನ ಪ್ರೀತಿ ಲೋಕದಲ್ಲಿ
ಅರಳಿದ ಕುಸುಮ...
ನಿನ್ನ ಈ ಬರುವಿಕೆ
ಬೆಳಗಿದೆ ಜೀವನ
ನನ್ನೊಳು ಹರುಷಕೆ
ನಿನ್ನೊಲುಮೆಯೇ ಕಾರಣ
ನಮ್ಮಯ ಬಾಳಲಿ ನಾ ನಿನ್ನ ಸೇವಕ
ನಿನ್ನಯ ಪ್ರೀತಿಗೆ ನಾನಾದೆ ಭಾವುಕ
ಎಂದೆಂದೂ ನಮ್ಮ ಜೀವ ಒಂದುಗೂಡಿ
ಉದಿಸಲಿ ಸಂಭ್ರಮ...
-ಶ್ರೀಸುತ
Photo Credit: Alliswall
Photo Credit: Alliswall

ಉತ್ತಮ ಪ್ರಯತ್ನ. ಡಿಜಿಟಲ್ ಮಾಧ್ಯಮ ರಂಗದಲ್ಲಿ ಶ್ರೀಸುತ ತಾಣಕ್ಕೆ ಶುಭವಾಗಲಿ. ಸದಭಿರುಚಿಯ ಬರಹಗಳ ನಿರೀಕ್ಷೆಯಲ್ಲಿ.
ReplyDeleteಧನ್ಯವಾದಗಳು ನಾಗರಾಜ ಭಟ್ರೆ... ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರಯತ್ನ ಮುಂದುವರಿಸುವೆ...
Deleteಬಹಳ ಅರ್ಥಪೂರ್ಣವಾಗಿದೆ.
ReplyDeleteಧನ್ಯವಾದಗಳು ಮಾನಸ ಅವರೇ... ಸಹಕಾರ ಹೀಗೆಯೇ ಇರಲಿ.
Deleteಉತ್ತಮ ಬರಹ...ಸ್ಪೂರ್ತಿ ತುಂಬುವಂತದ್ದಾಗಿದೆ
ReplyDeleteಧನ್ಯವಾದಗಳು...
Delete