ಎತ್ತ ಸಾಗಲಿ?


ಭಾವಗೀತೆ ೧ - ಎತ್ತ ಸಾಗಲಿ?

ಎತ್ತಲೋಡಲಿ ನಾನು
ಎತ್ತನೋಡಲಿ ನಾನು
ಅತ್ತಿತ್ತ ಸುಳಿಯುತಿದೆ ಕಪ್ಪುಛಾಯೆ |
ಮತ್ತು ಬರಿಸುವ ಜೇನು
ಕತ್ತು ಕೊರೆಯುವ ಮೀನು
ಸತ್ತು ಬರವಾಗುತಿದೆ ಕಾಯಛಾಯೆ ||

ಸಾಗರದ ಗರ್ಭದಲಿ
ಆಗರ್ಭ ಲೋಕದಲಿ
ನಗುವಿನಲೆ ಸುಳಿಯಂತೆ ಸುಳಿಯುವಾಗ |
ಆಗಮನ ನಿರ್ಗಮನ
ಧಗೆಯೊಳಗೆ ತನುಮನ
ಹುಗಿಯುತಿದೆ ಸಿಗಿಯುತಿದೆ ಅಳಿಯುವಾಗ ||

ಇಷ್ಟು ಪರಿತಾಪಗಳು
ಕಷ್ಟದಿಂದಲಿ ಬರಲು
ಎಷ್ಟು ದುಃಖವು ಎದೆಯ ಸೀಳಬಹುದು |
ಅಷ್ಟು ಇಷ್ಟಿಷ್ಟಿರದೆ
ಇಷ್ಟ ನಷ್ಟದ ಪರದೆ
ಭ್ರಷ್ಟವಾಗಿದೆ ಸತ್ಯ ವಿಷಕಾರಬಹುದು ||

ಬೆವರಹನಿಹನಿಯಲ್ಲಿ
ಅವರವರ ದನಿಯಲ್ಲಿ
ಭವದ ಬಂಧನದೊಳಗೆ ಸುಖವ ಬಯಸಿ |
ಆವ ಸಂತಸ ಕ್ಷಣವ
ನೀವ ಭಗವತ್ ದೇವ
ಅವತರಿಸಿರೆ ನೋವು ಸುಖವ ಧಗಿಸಿ ||

                                               -ಶ್ರೀಸುತ
Photo Credit: THreePullpa

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.