ಎದ್ದಿದೆ ಭೆಂಕಿ ಎದ್ದಿದೆ


ಎದ್ದಿದೆ ಬೆಂಕಿ ಎದ್ದಿದೆ ಇಂದು
ಮೌನದೊಳಗೆ ಸೂರ್ಯತೇಜ ಹೊಮ್ಮಿದೆ
ಅನ್ಯಾಯವ ಬಡಿದಟ್ಟಲು
ಹೋರಾಟದ ಎದೆತಟ್ಟಲು
ಅತ್ತ ಇತ್ತ ಸುತ್ತಮುತ್ತ ನೋಡದೇ
ಎದ್ದಿದೆ ಬೆಂಕಿ ಎದ್ದಿದೆ... ||

ಸ್ನೇಹದ ಸ್ನೇಹಮಿತ್ರನೂ
ಸೂತ್ರದೊಳಗೆ ಬೊಂಬೆಯಾದನು
ಸೈನ್ಯದ ಸತ್ವದಾಚೆಗೆ
ಮಿತ್ರನಿಂದು ದೂರವಾದನು
ಎದ್ದನು ಗಜಸಿಂಹನು ಸೈನ್ಯದತ್ತ ಹೆಜ್ಜೆಹಾಕುತ
ಗೆದ್ದನು ಶೂರವಂತನು ಸತ್ಯದತ್ತ ಚಿತ್ತಹಾಸುತ ||

ಯೋಧನಾದ ಶೋಧನೆಗಾಗಿ
ಎಲ್ಲಿ ನ್ಯಾಯ ಎಲ್ಲಿ ತತ್ವವೆನ್ನುತ
ತನ್ನಯ ತವರುನಾಡಿನ
ಹೆಸರಿನಲ್ಲಿ ವೀರತೆಯನು ಕಟ್ಟಲು
ಎದೆಗಾರಿಕೆಯ ಅರ್ಥವನೆತ್ತಿ
ಸೆದೆಬಡಿಯುತ ಸುಳಿಯ ಸುತ್ತ ಸುತ್ತುತಾ ||

ದೇಶಕಾಗಿ ದೇಹಧಾರಣೆ
ವೇಷತೊಟ್ಟು ನ್ಯಾಯಪಾಲನೆ
ಕರ್ಮಭೂಮಿಯ ಧರ್ಮಕಾಯಲು
ಗರ್ವದಿಂದ ಗಂಡುಗಲಿಯು ಗದರಿದೆ
ಹತ್ತಿದೆ ಕಿಚ್ಚು ಹೆಚ್ಚಿದೆ
ಹೊಸ ಭಾಷ್ಯವ ಕೊಡಲು ಭೆಂಕಿ ಎದ್ದಿದೆ ||

-ಶ್ರೀಸುತ
Photo Credit: Deviantart

ಅನ್ಯಾಯದ ಸಂಕೋಲೆಗೆ ಸಿಲುಕಿದ ಯುವಕನೋರ್ವನು ತನಗಾದ ಅನ್ಯಾಯದ ವಿರುದ್ಧ ಹೋರಾಡಲು ಸೈನ್ಯದತ್ತ ಮುಖಮಾಡಿ ನಡೆಯುತ್ತಾನೆ... ಆ ಸಂದರ್ಭಕ್ಕೆ ತಕ್ಕಂತೆ ಬರೆಯಲಾದ ಕವಿತೆ.
ರಚನೆ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು.

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.