ಭಾರತದ ಶುಭ್ರತೆಯ ಸೌಭಾಗ್ಯ ಸಿಂಧು
ಬೇಧವನರಿಯದ ಭವಭೂತಿ ಬಿಂದು
ಕಲೆಗಾರ ನೂರಾರು ನುಡಿಮುತ್ತು ಸರದಾರ
ಜ್ಞಾನಸೌಧದೊಳು ಮಕ್ಕಳಿಗೆ ಆಧಾರ
ವಾತ್ಸಲ್ಯ ಪ್ರೀತಿ ಮಮಕಾರಗಳ ಸುಕುಮಾರ
ಮಂದಹಾಸದ ನಗುವೇ ಅವಗೆ ಶೃಂಗಾರ
ದೇಶಕ್ಕೆ ಅಗ್ನಿಯ ರೆಕ್ಕೆಗಳ ಚಿತ್ರಿಸುತ
ಆಕಾಶದೆತ್ತರಕೆ ರಾಷ್ಟ್ರಪಥ ಹಾರಿಸುತ
ಅಣುರೇಣು ಕಣಕಣಗಳನ್ನು ಪರಿಶೋಧಿಸುತ-
ಲಂದು ಮೂಡಿಸಿದ್ದರು ದಿವ್ಯ ನವಭಾರತ
ಜಾತಿಧರ್ಮವ ಮೀರಿ ನಿಂತ ಮಾನವತಾವಾದಿ
ಒಡಲ ದನಿಯನ್ನೆಸೆವ ಚತುರ ಪ್ರವಾದಿ
ಬೆವರೆಂಬ ಜಡವನೆಸೆದು ಕಷ್ಟದಿ ಓದಿ
ಹಾಕಿಹೋದರು ದೇಶಕ್ಕೆ ಭದ್ರಬುನಾದಿ
ಕಲಾಸಿಂಧು ಭಾರತದ ಅಬ್ದುಲ್ ಕಲಾಂ
ಉತ್ತುಂಗದ ಮಹಾಶಯನಿಗಿರಲಿಲ್ಲ ಅಹಂ
ಕೊನೆಯುಸಿರ ಹಾದಿಯಲೂ ಧ್ವನಿಬಿಡದೆ ನಿಂ-
ತಿದ್ದ ಭಾರತದ ರತ್ನನಿಗಿದೋ ಕೋಟಿ ಸಲಾಂ.
-ಶ್ರೀಸುತ
Photo Credit: Indian Express
ಭಾರತ ಕಂಡಂತಹ ಹೆಮ್ಮೆಯ ಪ್ರಥಮ ಪ್ರಜೆ, ಭಾರತದ ಅಣುವಿಜ್ಞಾನಿ,
ಸರ್ವಕಾಲಕ್ಕೂ ಎಲ್ಲರ ಹೃದಯದಲ್ಲಿ ನಗುಮುಖದಿಂದ ಕಾಣಿಸಿಕೊಳ್ಳುವ
ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನಮ್ಮನ್ನಗಲಿ ಇಂದಿಗೆ
2 ವರ್ಷ ಸಂದಿತು. ಈ ಸಂದರ್ಭದಲ್ಲಿ ಅವರಿಗೊಂದು ಕಿರು ನುಡಿನಮನ...
ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನಮ್ಮನ್ನಗಲಿ ಇಂದಿಗೆ
2 ವರ್ಷ ಸಂದಿತು. ಈ ಸಂದರ್ಭದಲ್ಲಿ ಅವರಿಗೊಂದು ಕಿರು ನುಡಿನಮನ...
ರಚನೆ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
27-07-2015
ಸುಂದರ ಕವನ... ಬಹಳ ಇಷ್ಟವಾಯ್ತು :)
ReplyDeleteಧನ್ಯವಾದಗಳು ರಂಜನಾ ಅವರೇ...
Delete