ಗುರುಕೃಪೆ


ವಂದಿಸುವೆ ಗುರು
ನಿನ್ನ ಚರಣ ಕಮಲಕ್ಕೆ
ಕಟುಕರ ಕೈ ಸೇರುತಿದ್ದ
ಗೋವುಗಳ ಕಾಯ್ದೆ
ನೀನು ಕೃಷ್ಣನಂತೆ

ಶ್ರೀ ರಾಮನಾದರ್ಶವನು
ಜನ ಮನದಲ್ಲಿ ಬಿತ್ತಿದೆ ನೀ
ರಾಮಕಥೆಯೆಂಬ
ಕಥಾಮೃತ ಸಾರವನುಸುರಿ

ನೀ ಕಟ್ಟಿಸಿದೆ
ವಿದ್ಯಾಮಂದಿರಗಳ
ಪ್ರತಿಯೊಬ್ಬರ ವಿದ್ಯೆಗೆ
ಅನುಕೂಲವಾಗಲೆಂದು

ನಿತ್ಯವೂ ನೀ ಮಾಡುತಿರುವೆ
ಲೋಕದೊಳಿತನ್ನು
ನಿನ್ನ ಕೀರ್ತಿಯು ಜಗದಗಲ
ಹರಡುವುದ ಕಂಡು
ಸಹಿಸಲಾರದೆಯೇ
ಬಗೆ ಬಗೆಯ ಕಿರುಕುಳವ
ಕೊಡುತಲಿದ್ದರೂ ಕೂಡ
ನೀ ಕ್ಷಮಿಸಿದೆಯವರನ್ನು
ವಾಸುದೇವನಂತೆ

ಸತ್ಯದ ದಾರಿಯಲಿ
ನಡೆಯುತಿರುವ ನಿನಗೆ
ಶ್ರೀರಾಮ ರಕ್ಷೆಯಿರಲು
ಯಾರೇನು ಮಾಡುವರು
ಯಾರಿಂದಲೇನಹುದು

ದಿನ ದಿನಕೆ ಎಲ್ಲ
ಮಿಥ್ಯಾರೋಪಗಳ
ಕಳೆದು ನೀ ಪ್ರಕಾಶಿಸಿದೆ
ಸೂರ್ಯನಂತೆ

ಶರಣೆಂಬೆ ನಿನಗೆ
ನಿನ್ನ ಪಾದಕಮಲಕ್ಕೆ
ತೋರು ನೀ ನಮಗೆಲ್ಲ
ಮುಕ್ತಿ ಮಾರ್ಗವನು
ನಿನ್ನ ಕೃಪಾ ಛತ್ರದಲಿ
ನಮ್ಮನಿಟ್ಟು ಕಾಯು
ನೀ ತಂದೆ

-ಶ್ರೀಮತಿ ಪಂಕಜಾ ರಾಮಭಟ್

Photo Credit: Hare Rama

Author image
About the Author
ಹೆಸರು:ಶ್ರೀಮತಿ ಪಂಕಜಾ ರಾಮಭಟ್.
▪ಶ್ರೀಮತಿ ಪಂಕಜ ರಾಮಭಟ್ ಇವರು ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ಎಂಬಲ್ಲಿ ವಾಸವಾಗಿದ್ದು ಸಾಹಿತ್ಯ ಕೈಂಕರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಮಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಈವರು ಮಂಗಳೂರು ಹೆಡ್ ಪೋಸ್ಟ್ ಆಫೀಸ್ ನಲ್ಲಿ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದ್ದು ಇದೀಗ ಸ್ವಯಂ ನಿವೃತ್ತಿ ಪಡೆದುಕೊಂಡು ಪ್ರಸ್ತುತ ಗೃಹಿಣಿಯಾಗಿ ಕಥೆ-ಕವನ ಬರೆಯುವ ಹವ್ಯಾಸದಲ್ಲಿ ತೊಡಗಿರುತ್ತಾರೆ. ಸಾಹಿತ್ಯದ ಜೊತೆ ಜೊತೆಗೆ ಹೊಲಿಗೆ, ಕಸೂತಿ, ಗಾರ್ಡೆನಿಂಗ್ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡ ಇವರು ಒಬ್ಬಾಕೆ ಪ್ರತಿಭಾವಂತ ನಾರಿ ಎಂದರೆ ತಪ್ಪಾಗಲಾರದು. ನಮ್ಮ ಜಾಲತಾಣದಲ್ಲಿ ಇವರು ಬರೆದಿರುವ ಕಥೆ-ಕವಿತೆಗಳನ್ನು ಓದಬಹುದು.

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.