ಮಗುವಿಗೊಂದು ಕಿವಿಮಾತು


ಚಿತ್ರಕವನ ೧:

ಓ ಮುದ್ದು ಕಂದನೇ
ಅಮ್ಮ ಎಲ್ಲೆಂದು ನೀ
ಕೇಳಬೇಡ ನನ್ನ.
ನನ್ನ ಕಣ್ಣಲ್ಲಿ ಕಣ್ಣಿಟ್ಟು
ಹೃದಯಕ್ಕೆ ಕಿವಿಯಾನಿಸಿ
ಮನಸೊಳಗೆ ಬೆರೆತು
ನೋಡು ಕಾಣುವೆ ಅಲ್ಲೆಲ್ಲ
ಪ್ರತಿಕ್ಷಣವು ನಿನ್ನ ಕರೆಗೆ
ಓಗೊಡುವ ಅಮ್ಮನನ್ನ.
ಅಪ್ಪನಾದರೇನು ನಾನು
ಕೊಡಬಲ್ಲೆ ಅಮ್ಮನ ಪ್ರೀತಿಯ
ಈ ನನ್ನ ಮಡಿಲಲ್ಲಿ.
ಕೈತುತ್ತು ಕೊಟ್ಟು ಲಾಲಿ ಹಾಡುತ
ಮಲಗಿಸುವೆ ನಾ ಕಥೆಯೊಂದ ಹೇಳಿ.
ಕೈಯೊಳಗೆ ಬಲವಿರುವ ತನಕ
ದುಡಿಯುವೆನು ನಿನಗಾಗಿ
ಕಣ್ಣೀರು ಚಿಂತೆಯನು ತೊರೆದು
ಕಲಿತು ವಿದ್ಯಾವಂತನಾಗು ಕಂದ.
ಪುಟಿದು ಮುನುಗ್ಗಿ ಬರಬೇಕು
ಹಿಡಿದಿರುವ ಚೆಂಡಿನಂತೆ
ತೊಡೆಯಬೇಕು ಹಿಂಸೆ
ಅನ್ಯಾಯ ಅತ್ಯಾಚಾರಗಳ.
ಸೋಲುಗೆಲುವುಗಳು
ಬಾಳ ಗೆಳೆಯರು ನಮಗೆ
ಪರಿಹಾಸ ಚುಚ್ಚು ಮಾತುಗಳ
ಕಡೆಗಣಿಸಿ ನಡೆ ಮುಂದೆ
ಅಂಜದೆ ಅಳುಕದೆ  ಎದ್ದೇಳು
ನೀ ವೀರ ಯೋಧನಂತೆ.
ನಿನಗಾಗಿ ನಾ ಬದುಕ ಸವೆಸುವೆ
ಬದುಕು ನೀ ಮಾತೃಭೂಮಿಗಾಗಿ
ಮಾಡು ನೀ ಸೇವೆ ಭೂಮಿತಾಯಿಗಾಗಿ
ಅದು ಹೆತ್ತವರಿಗೆ ನೀನೀಯುವ ಉಡುಗೊರೆ.

                                       -ಅನ್ನಪೂರ್ಣ, ಬೆಜಪ್ಪೆ


Author image
About the Author
ಹೆಸರು:ಶ್ರೀಮತಿ ಅನ್ನಪೂರ್ಣ.
ಕಿದೂರು ಸಮೀಪದ ಬೆಜಪ್ಪೆ ನಿವಾಸಿಯಾದ ಶ್ರೀಮತಿ ಅನ್ನಪೂರ್ಣ ಇವರು ಸಾಹಿತ್ಯ ಪ್ರಿಯರಾಗಿದ್ದು ಬರವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹವ್ಯಾಸಿ ಬರಹಗಾರರಾಗಿ ಅನೇಕ ಕವಿತೆಗಳನ್ನು ಬರೆದಿದ್ದು ಅವರ ಬರಹಗಳನ್ನು ನಮ್ಮ ಜಾಲದಲ್ಲಿ ಓದಬಹುದು.

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.