ಭಾವಗೀತೆ ೬ - ಎದೆಯ ಭಾವ
ಎದೆಯ ಭಾವ ಮುದುಡುತಲಿದೆ
ಪ್ರೀತಿಯೆರೆವರಿಲ್ಲದೆ
ಹೃದಯ ನೋವ ನುಂಗುತಲಿದೆ
ತೋರಿಕೊಳ್ಳಲಾಗದೆ
ಮಧುರ ಸಾಲುಗಳನು ಬರೆದೆ
ಚಿತ್ತದಲ್ಲಿ ಅದನು ಕೊರೆದೆ
ಎಷ್ಟು ಬಾರಿ ಯತ್ನಿಸಿದರೂ
ಸೋತೆ ಹಾಡಲಾಗದೆ
ಹೃದಯದನಿಯೆ ನಿನ್ನ ನೆನಹು
ಇರುಳಿನಲ್ಲೂ ಸುಡುತಲಿಹುದೆ
ಚುಕ್ಕಿತಾರೆ ಬೇಗೆಯಿಂದ
ಬೂದಿಯಾಗಿ ಸುರಿದಿದೆ
ಇಷ್ಟು ತಾಪವೇಕೆ ಎನಗೆ
ಎಷ್ಟು ಶಾಪವಿದೆಯೊ ಎನಗೆ
ಇಷ್ಟವಾದ ಹೂವೇ ಕೊನೆಗೆ
ಚುಚ್ಚುತಿಹುದು ಮನಸಿಗೆ
ಹಾಡುತಲಿದೆ ಹಾಡುತಲಿದೆ
ಮೌನದುಂಬಿ ಹಾಡುತಲಿದೆ
ನಾನೇ ಬರೆದ ಸಾಲುಗಳಿಗೆ
ಓಲೆ ಬರೆಯಬೇಕಿದೆ
ತಲುಪಬಲ್ಲುದೇನು ಓಲೆ
ಅಂತರಂಗದಂಚೆಯಲ್ಲಿ
ಭಾವತುಂಬಿ ಓದು ಒಮ್ಮೆ
ನಿನ್ನ ರಾಗದಲ್ಲಿ....
-ಶ್ರೀಸುತ
■ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
Photo Credit: drawingschool.com
ಭಾವಗೀತೆ ೫ - "ಜೀವವೀಣೆ"ಯನ್ನು ಓದಲು ಭಾವಗೀತೆ ೫ ಕ್ಲಿಕ್ ಮಾಡಿ.
ಎದೆಯ ಭಾವದಲ್ಲಿ ಅಕ್ಷರಗಳು ಅರಳಿವೆ..... ಚೆನ್ನಾಗಿದೆ..
ReplyDelete