ನೀನು ನನ್ನ ಜೀವ ಕಣೇ
ನೀನೆಲ್ಲಾ ಖುಷಿಯನು
ನನಗೆ ಏಕೆ ನೀಡುವೆ
ಯಾವ ಕಷ್ಟ ಬಂದರೂ ಎದುರಿಸುವೆ
ನನ್ನ ಖುಷಿಯ ಕಂಡು
ಜಗವ ನೀ ಗೆದ್ದಂತಿರುವೆ
ಅಮ್ಮ ಅಮ್ಮ ಅಮ್ಮ
ನೀನೇ ನನ್ನ ಜೀವ
ಅಮ್ಮ ಅಮ್ಮ ಅಮ್ಮ
ಧನ್ಯ ನನ್ನ ಜನುಮ
ನಿನ್ನ ಖುಷಿಗೆ ಏನನೂ
ಬಯಸದೆ ಬದುಕಿರುವೆ ನೀ
ನಿನ್ನ ಖುಷಿಗೆ ಏನೇನು
ಬೇಕು ಇಂದು ಕೇಳು ನೀ
ಏನು ಬೇಕೆಂದರೂ
ಅಮ್ಮನ ಬಳಿ ಬರುವೆ
ಯಾವ ಮಾತೂ ಆಡದೆ
ತಲೆಯನಾಡಿಸಿ ನಿಲುವೆ
ಅಮ್ಮ ಅಮ್ಮ ಅಮ್ಮ
ನಿನ್ನ ನೆನೆವೆ ಸದಾ
ಕಾಲ ಉರುಳಿ ಹೋಗಲು
ನೀನೇ ನನ್ನ ಕಂದಾ
-ಅನಂತರಾಜ್
Photo Credit: Pinterest
Chenagide..
ReplyDelete