೧. ಕವಿ
ಕವಿಯಾಗಿ ಬೆಳೆಯೆ, ಸವಿ ಸಹೃದಯರು ಬೇಕು
ಕವಿ ಕೃತಿಗಳ ಕೊ೦ಡೋದಿ ಕೊಂಡಾಡುವರು ಬೇಕು
ಶರೀರ ನಶ್ವರ ಸಾಧನೆ ಶಾಶ್ವತವು
ಉಳಿವುದು ಸಿದ್ಧಿಯ ಬಾಡದ, ಹೂವು.
ಕವಿ ಕೃತಿಗಳ ಕೊ೦ಡೋದಿ ಕೊಂಡಾಡುವರು ಬೇಕು
ಶರೀರ ನಶ್ವರ ಸಾಧನೆ ಶಾಶ್ವತವು
ಉಳಿವುದು ಸಿದ್ಧಿಯ ಬಾಡದ, ಹೂವು.
೨. ಧರ್ಮ
ಆತ್ಮಕೆ , ಇಲ್ಲವು ಜಾತಿ ಮತ ಧರ್ಮ
ಇದನು ತಿಳಿಯೆ ಅರಿವುದು ಬಾಳ ಮರ್ಮ
ತಿಳಿಯಬೇಕು ನಿಜ ಧಮ೯ ಮಾನವತೆ ಒಂದೇ
ಒಬ್ಬನೇ ಒಬ್ಬ, ದೇವನಿಗೆ ಎನ್ನುವೆ ವಂದೇ
ಆತ್ಮಕೆ , ಇಲ್ಲವು ಜಾತಿ ಮತ ಧರ್ಮ
ಇದನು ತಿಳಿಯೆ ಅರಿವುದು ಬಾಳ ಮರ್ಮ
ತಿಳಿಯಬೇಕು ನಿಜ ಧಮ೯ ಮಾನವತೆ ಒಂದೇ
ಒಬ್ಬನೇ ಒಬ್ಬ, ದೇವನಿಗೆ ಎನ್ನುವೆ ವಂದೇ
೩. ಹೂವುಗಳು
ಅಂಗಳದಲ್ಲಿ ಕಂಗಳ ತುಂಬುವ ಹೂವುಗಳು
ದಿನಾ ಅವು ಅರಳಿ ಚಂದದಿ ತೂಗುವವು
ಅವೆಲ್ಲವು ಉಲ್ಲಾಸದ ನಲಿವಿನ ಬುಗ್ಗೆಗಳು
ಸಂಜೆಯ ಕಾಲದಿ ಅವು, ಬಾಡಿ ಸೊರಗುವವು
ಅಂಗಳದಲ್ಲಿ ಕಂಗಳ ತುಂಬುವ ಹೂವುಗಳು
ದಿನಾ ಅವು ಅರಳಿ ಚಂದದಿ ತೂಗುವವು
ಅವೆಲ್ಲವು ಉಲ್ಲಾಸದ ನಲಿವಿನ ಬುಗ್ಗೆಗಳು
ಸಂಜೆಯ ಕಾಲದಿ ಅವು, ಬಾಡಿ ಸೊರಗುವವು
೪. ಹೊನ್ನು ಹಸಿರು
ಎಲೆ , ಹೂವುಗಳು ನಮ್ಮವು
ತೊಟ್ಟನು ಕಳಚಿ ಪಟ್ಟನೆ ಉದುರುವವು
ಬುವಿತಾಯಿಯ ಒಡಲಿಗೆ ಸೇರುವವು
ಹೊನ್ನಿನ ಮಣ್ಣಿನ ಸಾರವ, ವರ್ಧಿಸುವವು.
ಎಲೆ , ಹೂವುಗಳು ನಮ್ಮವು
ತೊಟ್ಟನು ಕಳಚಿ ಪಟ್ಟನೆ ಉದುರುವವು
ಬುವಿತಾಯಿಯ ಒಡಲಿಗೆ ಸೇರುವವು
ಹೊನ್ನಿನ ಮಣ್ಣಿನ ಸಾರವ, ವರ್ಧಿಸುವವು.
೫. ಸಾರ್ಥಕ
ಬದುಕಿದು ಅಮರ ಎಂದು ತಿಳಿಯದಿರು
ಇದಕಾಗಿ ಮಾನವ ನೀನು, ಕೊರಗದಿರು
ಎಂದು ನಾವು ಹೂವುಗಳು ಸಾರುವೆವು
ದೇವನ ಸಿರಿಮುಡಿಗೆ ಏರುವೆವು ನಾವು
ದೇವನ ಪೂಜೆಗೆ ಒದಗಿ ಬದುಕದು ಸಾರ್ಥಕವು.
-ಗುಣಾಜೆ ರಾಮಚಂದ್ರ ಭಟ್
ಬದುಕಿದು ಅಮರ ಎಂದು ತಿಳಿಯದಿರು
ಇದಕಾಗಿ ಮಾನವ ನೀನು, ಕೊರಗದಿರು
ಎಂದು ನಾವು ಹೂವುಗಳು ಸಾರುವೆವು
ದೇವನ ಸಿರಿಮುಡಿಗೆ ಏರುವೆವು ನಾವು
ದೇವನ ಪೂಜೆಗೆ ಒದಗಿ ಬದುಕದು ಸಾರ್ಥಕವು.
-ಗುಣಾಜೆ ರಾಮಚಂದ್ರ ಭಟ್
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.