About Site

ಶ್ರೀಸುತ.ಕಾಮ್ ನ ಬಗ್ಗೆ ಒಂದಿಷ್ಟು...


ನಮಸ್ಕಾರ,

      ಶ್ರೀಸುತ ಎಂಬ ಹೆಸರನ್ನು ಈ ಜಾಲತಾಣಕ್ಕೆ ಇಡಲು ಮುಖ್ಯವಾದ ಕಾರಣ ಎಂದರೆ ಅದು ನನ್ನ ಸಾಹಿತ್ಯದ ಶಿರೋನಾಮ. ಅದು ನನಗೆ ಬಹಳ ಪ್ರೀತಿಯ ಹೆಸರು. ಇನ್ನು ಇದರ ಒತ್ತುಸಾಲಾದ "ಇದು ದಿವಾಣ ದರ್ಪಣದ ಬಿಂಬ", ಇದಕ್ಕೂ ಒಂದು ಬಲವಾದ ಕಾರಣವಿದೆ. ನನ್ನ ಅಜ್ಜನಾದಂತಹ ದಿವಂಗತ ಗಣಪತಿ ದಿವಾಣರ ನೆನಪಿಗಾಗಿ ಈ ದಿವಾಣ ದರ್ಪಣ. ಕೆಲವು ವರ್ಷಗಳ ಹಿಂದೆ ಅಜ್ಜ ಗಣಪತಿ ದಿವಾಣರು ದರ್ಪಣ ಸಾಹಿತ್ಯ ವೇದಿಕೆ, ದರ್ಪಣ ಮಾಸಪತ್ರಿಕೆ, ದಿವಾಣ ಪ್ರಕಾಶನ ಮೊದಲಾದ ಹೆಸರುಗಳಡಿಯಲ್ಲಿ ಸಾಹಿತ್ಯ ಕೃಷಿಯನ್ನು ಬಹುವಾಗಿ ಮಾಡಿದವರು. ದಿವಾಣ ದರ್ಪಣ ಎಂಬ ಕೃತಿಯೂ ಅಜ್ಜನದೊಂದಿದೆ. ಹಾಗಾಗಿ ನನಗೆ ಆ ದರ್ಪಣ ಎನ್ನುವ ಪದದ ಮೇಲೆ ಇನ್ನಿಲ್ಲದ ವ್ಯಾಮೋಹ, ಪ್ರೀತಿ ಎಲ್ಲದಕ್ಕಿಂತ ಹೆಚ್ಚಾಗಿ ಕನಸು. ದರ್ಪಣ ಎಂದರೆ ಕನ್ನಡಿ ಎಂದರ್ಥ. ಇಲ್ಲಿ ದರ್ಪಣ ಎಂದರೆ ನನಗೆ ನನ್ನಜ್ಜ ಗಣಪತಿ ದಿವಾಣರು. ಅದರಲ್ಲಿ ಬರುವ ಬಿಂಬವೇ ಈ ನನ್ನ ಸಾಹಿತ್ಯ ಯಾತ್ರೆ. ಈ ಯಾತ್ರೆಗೆ ದಿಕ್ಸೂಚಿ ಆ ದರ್ಪಣ. ಆದ್ದರಿಂದ ಈ ಒತ್ತುಸಾಲನ್ನು ಇಟ್ಟು ಅರ್ಥಪೂರ್ಣಗೊಳಿಸಿದ್ದೇನೆ. ಇದಿಷ್ಟು ಈ ಜಾಲತಾಣದ ಹೆಸರುಗಳೇಕೆ ಹೀಗೆ ಎಂಬುದರ ಸಂಕ್ಷಿಪ್ತ ವಿವರ.

ಇನ್ನು, ಈ ಜಾಲತಾಣದಲ್ಲಿ ಏನೆಲ್ಲಾ ಸಿಗುತ್ತವೆ ಎಂಬುದಕ್ಕೆ ಮತ್ತೊಂದಿಷ್ಟು ವಿವರ-
  • ಶ್ರೀಸುತ ಎಂಬ ಪ್ರಧಾನ ಅಂಕಣಕ್ಕೆ ಭೇಟಿ ನೀಡಿದರೆ ಅಲ್ಲಿ ನಾನು ಬರೆದಿರುವಂತಹ ಕಥೆ, ಕವಿತೆ ಹಾಗೂ ಲೇಖನಗಳನ್ನು ಓದಬಹುದು.
  • ದರ್ಪಣ ಅಂಕಣದಲ್ಲಿ ನಾನು ಬರೆದಿರುವ ಚುಟುಕಗಳನ್ನು ಓದಬಹುದು.
  • ಬರಹಗಾರರ ಕೂಟ ಎಂಬುದು ಬರಹಗಾರರದ್ದೇ ಅಂಕಣ. ನಮ್ಮ ಜಾಲತಾಣಕ್ಕೆ ಪ್ರಕಟಿಸಲೋಸುಗ ಬಂದಂತಹ ಅನೇಕ ಲೇಖಕ/ಲೇಖಕಿಯರ ಕಥೆ, ಕವನ, ಚುಟುಕ ಹಾಗೂ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಹಾಗಾಗಿ ಬೇರೆ ಲೇಖಕ/ಲೇಖಕಿಯರ ಬರಹಗಳನ್ನೂ ಈ ಜಾಲತಾಣದಲ್ಲಿ ಬರಹಗಾರರ ಕೂಟದಡಿಯಲ್ಲಿ ನೀವು ಓದಬಹುದು.
  • ನಿಮ್ಮ ಬರಹಗಳನ್ನೂ ಪ್ರಕಟಿಸುತ್ತೇವೆ. ಕನ್ನಡ, ಸಂಸ್ಕೃತ ಹಾಗೂ ತುಳು ಭಾಷೆಯ ಕಥೆ, ಕವಿತೆ ಹಾಗೂ ಲೇಖನಗಳನ್ನು ಲೇಖಕರ ಕಿರುಪರಿಚಯ, ಭಾವಚಿತ್ರ ಹಾಗೂ ಬರಹದ ಅಕ್ಷರಮುದ್ರಣದೊಂದಿಗೆ barahagalu@shrisutha.com ವಿಳಾಸಕ್ಕೆ ಕಳುಹಿಸಿ.
  • ಅದೇ ರೀತಿ ಸಾಧಕರ ಹಾದಿ ಅಂಕಣವು ಮಹತ್ವದ್ದಾಗಿದ್ದು ಸಾಧಕರ ಸಾಧನೆಯ ಹಾದಿಯನ್ನು ತೆರೆದಿಡುವ ಅಳಿಲು ಪ್ರಯತ್ನವನ್ನು ಇಲ್ಲಿ ಮಾಡುವ ಉದ್ದೇಶ ಹೊಂದಿದ್ದೇನೆ. ನಮ್ಮ ಸುತ್ತಮುತ್ತಲಿನ ಅನೇಕ ಸಾಧಕರ ಪರಿಚಯವನ್ನು ಮಾಡಿಕೊಡುವುದೇ ಈ ಸಾಧಕರ ಹಾದಿ.
  • ಎಲ್ಲಾ ಬರಹಗಳು ಆಯ್ಕೆಯ  ಅಡಿಯಲ್ಲಿ ಸುಲಭವಾಗಿ ಎಲ್ಲಾ ತರಹದ ಬರಹಗಳನ್ನು ಹುಡುಕಿ ಓದಬಹುದು. 
  • ಕೊನೆಯದಾಗಿ ಜಾಲತಾಣದ ನಕ್ಷೆ... ಇದುವರಿಗಿನ ಎಲ್ಲಾ ಬರಹಗಳ ಒಂದು ಪರಿಷ್ಕೃತ ಪಟ್ಟಿ.
      ಇನ್ನು ಜಾಲತಾಣದಲ್ಲಿ SUBSCRIPTION ಆಯ್ಕೆಯನ್ನು ನೀಡಲಾಗಿದ್ದು ಆಸಕ್ತರು ತಮ್ಮ ಮಿಂಚಂಚೆ ವಿಳಾಸದ ಮೂಲಕ SUBSCRIBE ಮಾಡಿಕೊಳ್ಳಬಹುದು.

Subscribe ಮಾಡುವ ಹಂತಗಳು:
  1. ಮೊದಲು ನಿಮ್ಮ ಮಿಂಚಂಚೆ (Email) ವಿಳಾಸವನ್ನು SUBSCRIBE NOW ಮೇಲಿನ ಕೋಣೆಯಲ್ಲಿ ಹಾಕಿ ವೆರಿಫಿಕೇಶನ್ ಹಂತವನ್ನು ಪೂರ್ಣಗೊಳಿಸಿ.
  2. ತದನಂತರ ನಿಮ್ಮ ಮಿಂಚಂಚೆ ಖಾತೆಗೆ ತೆರಳಿ ಅಲ್ಲಿ ಬಂದಿರುವ ಸಂದೇಶನ್ನು ಓದಿ. ಅಲ್ಲಿ ನಿಮಗೆ ಇನ್ನೊಂದು ಕೊಂಡಿ (Link) ಯನ್ನು ನೀಡಲಾಗಿರುತ್ತದೆ. ಆ ಕೊಂಡಿಯನ್ನು ಒತ್ತಿ. ನಿಮ್ಮ SUBSCRIPTION ಸಂಪೂರ್ಣ ಹಂತಕ್ಕೆ ತಲುಪುತ್ತದೆ.
      ಶ್ರೀಸುತ ಜಾಲವು ಮೊಬೈಲ್ ಹಾಗೂ ಟ್ಯಾಬ್ಲೆಟ್ ಗಳಿಗೂ ಪೂರಕವಾಗಿದ್ದು ಮೊಬೈಲ್ ನಲ್ಲಿ ವೀಕ್ಷಿಸುವವರು Google Chrome ನಲ್ಲಿ ಬಳಕೆ ಮಾಡಿದರೆ ಶ್ರೀಸುತದ ನೈಜತೆಯನ್ನು ಚೆಂದವಾಗಿ ಕಾಣಬಹುದು.
ನೀವು ಇತರ ಬ್ರೌಸರ್ ಗಳನ್ನು ಉಪಯೋಗಿಸುತ್ತಿದ್ದಲ್ಲಿ ಹಾಗೂ ಕನ್ನಡ ಅಕ್ಷರಗಳ ವೀಕ್ಷಣೆ ಸರಿಯಾಗಿ ಆಗುತ್ತಿಲ್ಲವಾದಲ್ಲಿ ನಿಮ್ಮ ಪ್ರಸ್ತುತ ಬ್ರೌಸರ್ ನ ಸೆಟ್ಟಿಂಗ್ಸ್ ನಲ್ಲಿ Bitmap Font ಆಯ್ಕೆಯನ್ನು Enable ಮಾಡಿ.

      ನಾನು ಈ ಜಾಲತಾಣವನ್ನು ಪ್ರಾರಂಭ ಮಾಡಿದ್ದು ಸಾಹಿತ್ಯಕ್ಕಾಗಿ. ಕನ್ನಡ, ಸಂಸ್ಕೃತ ಹಾಗೂ ತುಳು ಈ ಮೂರು ಭಾಷೆಗಳ ಸಾಹಿತ್ಯ ಸಿಂಚನಕ್ಕಾಗಿ ಈ ವೇದಿಕೆ. ನಮ್ಮ ನಡುವೆ ಸಾವಿರಾರು ಬರಹಗಾರರಿದ್ದು ಎಲ್ಲರಿಗೂ ನನ್ನ ವೇದಿಕೆಗೆ ಪ್ರೀತಿಯ ಆಹ್ವಾನವನ್ನು ಸದಾ ನೀಡುತ್ತೇನೆ. ಬರೆಯುವವರು ಬರೆಯಬಹುದು, ಓದುವವರು ಓದಬಹುದು. ಸಧ್ಯಕ್ಕೆ ಸಣ್ಣ ಮಟ್ಟಿನಲ್ಲಿ ಪ್ರಾರಂಭ ಮಾಡಿದ್ದು ಮುಂದೆ ಅವಕಾಶ ಸಿಕ್ಕರೆ ಸ್ವಲ್ಪ ಜೀರ್ಣೋದ್ಧಾರ ಮಾಡುವ ಆಶೆಯಂತೂ ಇದ್ದೇ ಇದೆ. ಈ ಜಾಲತಾಣವನ್ನು ರೂಪಿಸಲು ಎಲ್ಲಾ ರೀತಿಯ ಸಹಕಾರವನ್ನು ಕೊಟ್ಟಂತಹ ನನ್ನ ಆತ್ಮೀಯ ಮಿತ್ರ ಶ್ರೀ ರಾಮಚಂದ್ರ ಹೆಗಡೆ ಇವರಿಗೆ ಈ ಸಂದರ್ಭದಲ್ಲಿ ಪ್ರೀತಿಯ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.

      ಈ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರ ಇದೆ ಎಂದು ಭಾವಿಸುತ್ತಿದ್ದೇನೆ. ಎಲ್ಲಾ ಭಾಷೆಗಳನ್ನು ಪ್ರೀತಿಸಿ. ಸಾಹಿತ್ಯವನ್ನು ಉಳಿಸಿ ಬೆಳೆಸಿ. ಓದಿ, ಇತರರಿಗೂ ಹಂಚಿ. ಪ್ರೀತಿಯಿಂದ ತಪ್ಪುಗಳನ್ನು ತಿದ್ದಿಸಿ ಒಪ್ಪುಗಳನ್ನು ಮುದ್ದಿಸಿ ಹರಸಿ. ಇದು ನಿಮಗಾಗಿ ತೆರೆದ ವೇದಿಕೆ. ಬನ್ನಿ ಭಾಗವಹಿಸಿ, ವೇದಿಕೆಯ ಹೊಳಪನ್ನು ಇನ್ನಷ್ಟು ಶುಭ್ರಗೊಳಿಸಿ.

ಧನ್ಯವಾದಗಳು,

ಇತೀ ನಿಮ್ಮ ಪ್ರೀತಿಯ,
ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

ಜಾಲತಾಣದ ವಿನ್ಯಾಸ: ಶ್ರೀ ರಾಮಚಂದ್ರ ಹೆಗಡೆ

ಶ್ರೀಸುತ ಜಾಲತಾಣವನ್ನು ಪ್ರಾರಂಭಿಸಿದ ದಿನಾಂಕ: 24-05-2017  ಬುಧವಾರ

Photo Credit: techsini.com