ಸ್ವಪ್ನಶಿಲ್ಪಿ-ಅಭಿನಂದನಾ ಗೀತೆ


ಹಿರಿಯ ಶಿಕ್ಷಣ ತಜ್ಞ, ಮಣಿಪಾಲ ವಿದ್ಯಾಸಂಸ್ಥೆಯ ಅಡ್ಮಿನಿಸ್ಟ್ರೇಟಿವ್ ಡೈರೆಕ್ಟರ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಶ್ರೀಯುತ ಡಾ. ಹೆಚ್. ಶಾಂತಾರಾಮ್ ಅವರ ತೊಂಭತ್ತನೇ ವಸಂತದ ಹೊಸ್ತಿಲ ನೆನಪಿಗಾಗಿ ವಿಜಯ ಕಾಲೇಜು ಮುಲ್ಕಿಯಲ್ಲಿ ದಿನಾಂಕ 10-08-2017, ಬುಧವಾರ ಜರಗಿದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರಿಗೆ ಗೌರವಪೂರ್ವಕವಾಗಿ ಬರೆದು ನೀಡಿದ "ಅಭಿನಂದನಾ ಗೀತೆ".
ಈ ಒಂದು ಶುಭಸಂಧರ್ಭದಲ್ಲಿ ನನ್ನನ್ನು ನೆನಪಿಸಿ
ಅವಕಾಶ ನೀಡಿದ ಪ್ರೀತಿಯ ಪ್ರೊ. ವಿಜಯಾ ಕುಮಾರಿ ಮೇಡಮ್ ಅವರಿಗೆ ನನ್ನ ತುಂಬು ಹೃದಯದ ವಂದನೆಗಳು...


▪ಸ್ವಪ್ನಶಿಲ್ಪಿ▪
ರಚನೆ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
ಮಧುಮಾಧವಿ-ತ್ರಿಪುಟ
ರಾಗ-ಹಂಸ್ವಧ್ವನಿ

ವರತಿಲಕ ಸಿರಿ ಶಾಂತರಾಮರೇ
ಮೆರೆದಿರೀಪರಿಯಿಂದ ಭವ್ಯದಿ
ಕರವ ಜೋಡಿಸಿ ಪೇಳಲಿರ್ಪೆವು
ಗುರುವೆ ತವ ಕೀರುತಿಯನು ||೧||

ವಿಠಲ ರುಕುಮಾ ದಂಪತಿಗಳಿಗೆ
ಹಿತದಿ ಜನಿಸಿದಿರಂದು ನಗರದಿ
ಹಠದಿ ಕಲಿಯುತ ಪದವಿಗೇರುತ
ರಥವನೆಳೆದಿರಿ ಬದುಕಲಿ ||೨||

ವಿಜಯಲಕ್ಷ್ಮೀ ಧರ್ಮಪತ್ನಿಯು
ವಿಜಯದಾಯಿನಿ ಪುತ್ರಿ ಶಾಲಿನಿ
ಸುಜನ ಚೇತನ ವಿಶ್ವದರ್ಶಕ
ಯಜನ ಬದುಕಲಿ ಶೋಧಕ ||೩||

ತಮ್ಮ ಸಾಧನೆ ಅತ್ಯಮೂಲ್ಯವು
ಹೆಮ್ಮೆ ಶಿಕ್ಷಣಕ್ಷೇತ್ರದೂರಿಗೆ
ಚಿಮ್ಮುತಿಹ  ಮಣಿಪಾಲ ಕೇಂದ್ರಕೆ
ನಿಮ್ಮ ಕಾಣಿಕೆ ಭೂಷಣ ||೪||

ವರುಷ ನವತಿಯು ಚಿಗುರಿ ಬರುತಿರೆ
ಹರುಷ ಚುರುಕಿನ ವೇಗ ನಿಮ್ಮೊಳು
ಬೆರೆತುಕೊಂಡಿರೆ ಸಕಲಕೋಶವು
ಮೆರೆಯೆ ಚತುರ ಕಲಾಪ್ರಿಯ ||೫||

ವಂದಿಸುತ್ತಲಿ ನಿಮ್ಮ ಪ್ರೀತಿಯ
ಚೆಂದದಿಂದಲಿ ಹಾಡುತಾ ಆ-
ನಂದಮೂರುತಿ ಸ್ವಪ್ನಶಿಲ್ಪಿಯೇ
ವಂದನಾರ್ಪಣೆಗೈವೆವು ||೬||

                                   -ಶ್ರೀಸುತ

ದಿನಾಂಕ: 10-08-2017






Please share and support me

2 comments:

  1. ಅಭಿನಂದನೆಗೊ ಕವನ ತುಂಬಾ ಲಾಯಿಕಿದ್ದು

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.